ಹಂಪಿಯಲ್ಲಿ ಜನ ಜಂಗುಳಿ!
ಕೊವಿಡ್ ನಿಯಮಾವಳಿ ಉಲ್ಲಂಘನೆಯಾಗುತ್ತಿದೆ
ಹಂಪಿ : ದೇಶದಲ್ಲಿ ಕೊರೊನಾ ಎರಡನೆಯ ಅಲೆ ಕಡಿಮೆಯಾಗುತ್ತಿದ್ದಂತೆ ಅನ್ ಲಾಕ್ ಪ್ರಕ್ರಿಯೆ ಆರಂಭವಾಗಿದೆ, ಆನ್ ಲಾಕ್ ಆಗುತ್ತಿದ್ದಂತೆ ಈಗ ಪ್ರವಾಸಿ ತಾಣಗಳಿಗೆ ಜನ ಬರುತ್ತಿದ್ದಾರೆ, ಈ ಮಧ್ಯೆ ಎರಡನೆಯ ಮುಗಿಯುತ್ತಿದ್ದಂತೆ ಮೂರನೆಯ ಅಲೆ ಆರಂಭವಾಗುತ್ತದೆ ಎಂಬ ಭೀತಿ ಇದೆ, ಪ್ರವಾಸಿ ತಾಣಗಳಿಗೆ ಜನ ಬರುತ್ತಿದ್ದಾರೆ, ಇಲ್ಲಿ ಕೊವಿಡ್ ನಿಯಮಾವಳಿ ಉಲ್ಲಂಘನೆಯಾಗುತ್ತಿದೆ.
ವಿಶ್ವವಿಖ್ಯಾತ ಹಂಪೆಗೆ ವೀಕೆಂಡ್ ಹಿನ್ನಲೆಯಲ್ಲಿ ಸಾಕಷ್ಟು ಜನ ಪ್ರವಾಸಿಗರು ಆಗಮಿಸಿದ್ದಾರೆ, ಕಳೆದ ಎರಡು ವಾರ ವೀಕೆಂಡ್ ಲಾಕ್ ಡೌನ್ ಇತ್ತು, ಈ ಕಾರಣಕ್ಕಾಗಿ ಪ್ರವಾಸಿಗರ ಸಂಖ್ಯೆ ಕಡಿಮೆ ಇತ್ತು, ಈ ವಾರದಿಂದ ವೀಕೆಂಡ್ ಕರ್ಫ್ಯೂ ಇಲ್ಲದ ಕಾರಣಕ್ಕೆ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಕಡೆಯಿಂದ ಸಾವಿರಾರು ಪ್ರವಾಸಿಗರು ಆಗಮಿಸಿದ್ದಾರೆ,
ವಿರುಪಾಕ್ಷ ದೇವಾಲಯ, ವಿಜಯ ವಿಠ್ಠಲ ಮಂದಿರ ಸೇರಿದಂತೆ ಇಲ್ಲಿ ಪ್ರಾವಾಸಿ ತಾಣಗಳಲ್ಲಿ ಆಗಮಿಸಿದ್ದಾರೆ, ಬಂದಿರುವ ಪ್ರವಾಸಿಗರಲ್ಲಿ ಬಹುತೇಕತರು ಮಾಸ್ಕ್ , ಸಮಾಜಿಕ ಅಂತರ ಕಾಪಾಡಿಕೊಂಡಿಲ್ಲ, ಪ್ರವಾಸಿ ತಾಣಗಳಲ್ಲಿ ಬರುವವರು ಸಮಾಜಿಕ ಅಂತರ ಮರೆತಿದ್ದಾರೆ, ಹಂಪಿಯಲ್ಲಿ ಇಕೋ ಟೂರಿಸಂ ಇರುವದರಿಂದ ಎಲೆಕ್ಟ್ರಿಕ ವಾಹನಗಳಲ್ಲಿ ಸಂಚರಿಸಬೇಕು, ಎಲೆಕ್ಟ್ರಿಕ್ ವಾಹನಗಳಲ್ಲಿ ಫುಲ್ ಆಗಿ ಪ್ರವಾಸಿಗರನ್ನು ಕರೆದುಕೊಂಡು ಹೋಗುತ್ತಿದ್ದಾರೆ. ಪ್ರಾವಾಸಿಗರ ನಿರ್ಲಕ್ಷ್ಯ ಹಾಗು ಹಂಪಿ ಅಭಿವೃದ್ಧಿ ಪ್ರಾಧಿಕಾರಿ, ಅಧಿಕಾರಿಗಳಿಂದಾಗಿ ಮೂರನೆಯ ಅಲೆಗೆ ಪ್ರವಾಸಿ ತಾಣಗಳು ಆಹ್ವಾನ ನೀಡುವಂತೆ ಇವೆ.