Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹಂತ ಹಂತವಾಗಿ ರಾಜ್ಯ ಅನ್ ಲಾಕ್

ಹಂತ ಹಂತವಾಗಿ ರಾಜ್ಯ ಅನ್ ಲಾಕ್
bangalore , ಶನಿವಾರ, 3 ಜುಲೈ 2021 (18:46 IST)
ಬೆಂಗಳೂರು : ಅನ್ ಲಾಕ್ 3.0 ಗೆ ಸರ್ಕಾರ ಅಸ್ತು ಎಂದಿದೆ. ಇದರ ಬೆನ್ನಲ್ಲೇ ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆ ಕೊರೊನಾ ಕಂಟ್ರೋಲ್ ಗೆ ಮುಂದಾಗುತ್ತಿದೆ.ಕೊರೊನಾ ನಿಯಂತ್ರಣಕ್ಕೆ ಬರುತ್ತಿರುವ ಬೆನ್ನಲ್ಲೇ ಹಂತ ಹಂತವಾಗಿ ರಾಜ್ಯ ಅನ್ ಲಾಕ್ ಆಗುತ್ತಿದೆ. ಅನ್ ಲಾಕ್ ಆದರೂ ಕೂಡ ಮತ್ತೆ ಕೊರೊನಾ ಹೆಚ್ಚಾಗುತ್ತೆ ಅನ್ನೋ ಆತಂಕ ಕೂಡ ಎದುರಾಗಿದೆ. ಹೀಗಾಗಿ ಅನ್ ಲಾಕ್ ಆದರೂ ಕೊರೊನಾ ನಿಯಂತ್ರಣಕ್ಕೆ ಬರಬೇಕು ಸೋಂಕು ಹೆಚ್ಚಾಗಬಾರದು ಎಂಬ ನಿಟ್ಟಿನಲ್ಲಿ ಇಂದು ಪಾಲಿಕೆ ಹಾಗೂ ಪೊಲೀಸ್ ಇಲಾಖೆ ಮಹತ್ವದ ಸಭೆ ನಡೆಸಿದೆ. ಹೌದು, ಮಾಲ್, ಮಾರ್ಕೆಟ್ ಓಪನ್ ಆದರೆ ಸೋಂಕು ಹೆಚ್ಚಳವಾಗಬಹುದು. ಹೀಗಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆ ಮುಂದಾಗಿದೆ. ಇನ್ನು ಇಂದು ನಡೆದ ಸಭೆಯಲ್ಲಿಯೂ ಸಾಕಷ್ಟು ವಿಚಾರಗಳ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಈ ಕುರಿತು ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ಬಿಬಿಎಂಪಿ ಕಮಿಷನರ್ ಗೌರವ್ ಗುಪ್ತಾ ಹೇಳಿಕೆ ಪರಿಸ್ಥಿತಿಗೆ ತಕ್ಕಂತೆ ಕ್ರಮ ಕೈ ಗೊಳ್ಳಲಾಗುವುದು. ಆಗ ಜನ  ಅನ್ ಲಾಕ್ ಬಯಸುತ್ತಾರೆ. ಹೀಗಾಗಿ ಕಂಟ್ರೋಲ್ ರಿಲ್ಯಾಕ್ಸಿಯೇಷನ್ ಮಾಡಲು ಚಿಂತನೆ. ಅನ್ ಲಾಕ್ ಹಿನ್ನೆಲೆ ಮಾರ್ಷಲ್ ಗಳ ಸಂಖ್ಯೆ ಹೆಚ್ಚಳ ಮಾಡಲು ಚಿಂತಿಸಲಾಗಿದೆ. ಕೋವಿಡ್ ನ ಯಾವುದೇ ನಿಯಮ ಬ್ರೇಕ್ ಮಾಡಿದ್ರು ಮಾರ್ಷಲ್ ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಇನ್ನು ಇದೇ ವೇಳೆ ಮಾತನಾಡಿದ ಪೊಲೀಸ್ ಆಯುಕ್ತ ಕಮಲ್ ಪಂಥ್, ಪಾಲಿಕೆ ಮತ್ತು ನಗರ ಪೊಲೀಸ್ ಇಲಾಖೆ ಜಂಟಿಯಾಗಿ ಕೆಲಸ ಮಾಡಲಾಗಿದೆ. ಪಾಲಿಕೆಗೆ ಪೊಲೀಸ್ ಇಲಾಖೆ ಸಂಪೂರ್ಣ ಸಹಕಾರ ಕೊಡಲಿದೆ. ಮದುವೆ ಸಮಾರಂಭ, ಮಾರ್ಕೆಟ್, ಮಾಲ್ ಗಳ ಕಡೆಯಲ್ಲ ನಿಗಾ ಇಡಲಾಗುತ್ತೆ. ಯಾರೇ ಕೋವಿಡ್ ನಿಯಮ ಪಾಲಿಸದಿದ್ದರೆ ndma ಕಾಯ್ದೆ ಅಡಿ ದೂರು ದಾಖಲಾಗುತ್ತೆ. ಪೊಲೀಸ್ ಮತ್ತು  ಮಾರ್ಷಲ್ಸ್ ಮತ್ತು ಕೋವಿಡ್ ವಾರಿಯರ್ಸ್ ಮೇಲೆ ಹಲ್ಲೆ ಮಾಡಿದರೆ ಕಠಿಣ ಕ್ರಮ ತೆಗೆದುಕೊಳ್ತೇವೆ ಎಂದರು. ಕೊರೊನಾ ನಿಯಂತ್ರಣದ ಜೊತೆಗೆ ಆರ್ಥಿಕ ವ್ಯವಸ್ಥೆ ಕೂಡ ಮುಖ್ಯ ಎಂಬ ನಿಟ್ಟಿನಲ್ಲಿ ಸರ್ಕಾರ ಹಂತ ಹಂತವಾಗಿ ಅನ್ ಲಾಕ್ ಮಾಡಲಾಗುತ್ತಿದೆ. ಜನ ಇದನ್ನ ಅರ್ಥ ಮಾಡಿಕೊಳ್ಳಬೇಕು. ಕೊರೊನ ನಿಯಮ ಪಾಲಿಸಬೇಕಾಗಿದೆ. ಇಲ್ಲದೇ ಹೋದರೆ ಕಾನೂನು ಕ್ರಮ  ಗ್ಯಾರಂಟಿಯಾಗಲಿದೆ

Share this Story:

Follow Webdunia kannada

ಮುಂದಿನ ಸುದ್ದಿ

ಪರೀಕ್ಷೆ ವಿನಾಯ್ತಿ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳಿಗೆ ಬಿಗ್ ಶಾಕ್