ರಾಜ್ಯದ ವಿಧಾನ ಸಭೆ ಹಾಗೂ ಲೋಕಸಭೆ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ನಲ್ಲಿ ಎದ್ದಿದ್ದ ಅಸಮಧಾನ ಹಾಗೂ ಅತೃಪ್ತಿಯನ್ನು ಪರಿಹರಿಸುವಲ್ಲಿ ಕಾಂಗ್ರೆಸ್ ನಾಯಕರು ಯಶಸ್ವಿಯಾಗಿದ್ದಾರೆ.
ರಾಮನಗರದಲ್ಲಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದ ಕಾಂಗ್ರೆಸ್ ಮುಖಂಡರ ನಡೆ ಬಗ್ಗೆ ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದರು. ಅಲ್ಲದೇ ಕೆಲವು ಕಾಂಗ್ರೆಸ್ ಮುಖಂಡರೂ ಸಹ ಅತೃಪ್ತಿ ಹೊರಹಾಕಿದ್ದರು.
ಕೆಪಿಸಿಸಿಯ ದಿನೇಶ್ ಗುಂಡೂರಾವ್ ಹಾಗೂ ಇನ್ನಿತರ ಮುಖಂಡರು ಕೈ ಪಾಳೆಯದ ಮುಖಂಡರ ಅತೃಪ್ತಿ ಶಮನಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜೆಡಿಎಸ್ ನಿಂದ ಅನಿತಾಕುಮಾರಸ್ವಾಮಿ ಅ.15ರಂದು ನಾಮಪತ್ರ ಸಲ್ಲಿಸಲಿದ್ದು, ಬಿಜೆಪಿಯಿಂದ ಸಿ.ಎಂ.ಲಿಂಗಪ್ಪ ಪುತ್ರ ಚಂದ್ರಶೇಖರ್ ಬಿಜೆಪಿಯಿಂದ ಕಣಕ್ಕೆ ಇಳಿಯುವುದು ಪಕ್ಕಾ ಆದಂತಿದೆ.