ಬೆಂಗಳೂರು : ಡಿಕೆಶಿವಕುಮಾರ್ ಅವರ ವಿರುದ್ಧ ಐಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಐಟಿ ಇಲಾಖೆ, ಡಿಕೆಶಿ , ಕುಟುಂಬಸ್ಥರಿಗೆ ನೋಟಿಸ್ ಮೇಲೆ ನೋಟಿಸ್ ನೀಡುತ್ತಿದೆ ಎಂಬುದಾಗಿ ತಿಳಿದುಬಂದಿದೆ.
ದಿನ ಬಿಟ್ಟು ದಿನ ನೋಟಿಸ್ ನೀಡಿರುವ ಐಟಿ ಇಲಾಖೆ ಈಗಾಗಲೇ ಡಿಕೆಶಿ , ಕುಟುಂಬಸ್ಥರಿಗೆ ಒಂದೇ ತಿಂಗಳಿನಲ್ಲಿ 30 ನೋಟಿಸ್ ನೀಡಿದೆ ಎನ್ನಲಾಗಿದೆ. ಡಿಕೆ ಶಿವಕುಮಾರ್, ಪತ್ನಿ ಉಷಾ, ಸೋದರ ಡಿಕೆ ಸುರೇಶ್ , ಡಿಕೆಶಿ ಪುತ್ರಿ ಐಶ್ವರ್ಯಗೂ ಐಟಿ ಇಲಾಖೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ.
ಚುನಾವಣೆ ಪ್ರಚಾರದ ಹಿನ್ನಲೆ ಡಿಕೆಶಿ ವಿಚಾರಣೆಗೆ ಹಾಜರಾಗಲು ಬೇರೆ ದಿನಾಂಕ ನಿಗದಿಗೆ ಮನವಿ ಮಾಡಿದರೂ ಕೂಡ ಐಟಿ ಇಲಾಖೆ ನೋಟಿಸ್ ಮೇಲೆ ನೋಟಿಸ್ ನೀಡಿದೆ, ಹೀಗಾಗಿ ಇಂದು ಡಿಕೆಶಿ ವಿಚಾರಣಗೆ ಹಾಜರಾಗಲಿದ್ದಾರೆ.