ಮೂರನೆಯ ದಿನವೂ ಮುಂದುವರೆದ ಐಟಿ ರೇಡ್: ಜೊತೆಯಲ್ಲೇ ಪ್ರಭಾವಿ ಕುಳಗಳಿಗೆ ಶುರುವಾದ ಇಡಿ‌ ಭಯ

Webdunia
ಶನಿವಾರ, 9 ಅಕ್ಟೋಬರ್ 2021 (20:40 IST)
ಬೆಂಗಳೂರು: ನಗರದಲ್ಲಿ ನೆಡೆಯುತ್ತಿರುವ ಐಟಿ ದಾಳಿಯ ಬಳಿಕ ಈಗ ಇ.ಡಿ‌ ಭಯ ಟ್ಯಾಕ್ಸ್ ಕಳ್ಳರಿಗೆ ಹಾಗೂ ಅಕ್ರಮ ಹಣ ಸಂಪಾದಿಸಿದ್ದ ಭಾರಿ ಕುಳಗಳಿಗೆ ಶುರುವಾಗಿದೆ. ಎರಡು ದಿನಗಳಿಂದ ಬೆಂಗಳೂರಿನಲ್ಲಿ ನಡೆದಿರುವ ಐಟಿ ದಾಳಿ ಇಂದೂ ಸಹ ಮುಂದುವರೆಯಲಿದೆ ಎಂದು ಮೂಲಗಳು ತಿಳಿಸಿವೆ.
 
ಬಿಎಸ್ ವೈ ಅಪ್ತ ಉಮೇಶ್, ಚಾರ್ಟೆಡ್ ಅಕೌಂಟೆಂಟ್ ಗಳು ಹಾಗೂ ಕಂಟ್ರಾಕ್ಟರ್ ಗಳ ಮೇಲೆ ನಡೆದಿದ್ದ ದಾಳಿಯಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ಪತ್ತೆಯಾಗಿದೆ. ಪಿ.ಎಂ.ಎಲ್.ಎ ಕಾಯ್ದೆಯನ್ನು ಉಲ್ಲಂಘಿಸಿರುವುದು ಐಟಿ ದಾಳಿ ವೇಳೆ ಬೆಳಕಿಗೆ ಬಂದಿದೆ. ತೆರಿಗೆ ವಂಚನೆ ಜೊತೆ ಜೊತೆಗೆ  ಆಕ್ರಮ ಹಣ ಮತ್ತು ಸಂಪತ್ತು ಸಂಗ್ರಹಿಸಿರುವ ಹಲವು ಕಂಟ್ರಾಕ್ಟರ್ ಗಳ ವಿರುದ್ಧ ಕ್ರಮ ಕೈಗೊಳ್ಳಲು ಮತ್ತು ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ತಲುಪಿಸಲು ಶೀಘ್ರವೇ ಐಟಿಯಿಂದ ಇ.ಡಿ ಗೆ ಪತ್ರ ರಾವನೆಯಾಗಲಿದೆ. ಈ ಹಿನ್ನೆಲೆಯಲ್ಲಿ ಹಲವು ಕಂಟ್ರಾಕ್ಟರ್ ಗಳಿಗೆ ನಡುಕ ಶುರುವಾಗಿದೆ ಎನ್ನಲಾಗುತ್ತಿದೆ.
 
ಮೂರನೇ ದಿನವೂ ಮುಂದುವರೆದ ಐಟಿ ರೇಡ್: 
 
ಸತತ 48 ಘಂಟೆಗಳಿಂದ ನಡೆಯುತ್ತಿರುವ ಐಟಿ ಸರ್ಚ್ ಇಂದೂ ಮುಂದುವರೆದಿದೆ. ಉಮೇಶ್ ಆಪ್ತ ಸೋಮಶೇಖರ್ ಮನೆಯನ್ನು ಜಾಲಾಡಿ ಕಡತಗಳನ್ನು  ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಗುರುವಾರ ರಾತ್ರಿ ಸೋಮಶೇಖರ್ ಮನೆಯಲ್ಲೇ ಐಟಿ ಅಧಿಕಾರಿಗಳು ಮೊಕ್ಕಾಂ ಹೂಡಿದ್ದರು ಎನ್ನುವ ಮಾಹಿತಿ ದೊರೆತಿದೆ.
 
ಉಮೇಶ್ ಗೆ ಅತ್ಯಾಪ್ತಾನಾಗಿದ್ದ ಕ್ಲಾಸ್ 1 ಗುತ್ತಿಗೆದಾರ ಸೋಮಶೇಖರ್ ನೀರಾವರಿ ನಿಗಮದ ಹಲವು ಕಾಂಟ್ರಾಕ್ಟ್ ಗಳನ್ನು ಪಡೆಯುತ್ತಿದ್ದ. ಇಬ್ಬರ ನಡುವೆ ಹಲವು ಅಕ್ರಮ ವ್ಯವಹಾರಗಳು ನಡೆದಿರುವ ಬಗ್ಗೆ ಮಾಹಿತಿಯನ್ನು ಐಟಿ ಆಫೀಸರ್ಸ್ ಕೆಲೆ ಹಾಕುತ್ತಿದ್ದಾರೆ.ಸೋಮಶೇಖರ್ ಬ್ಯಾಂಕ್ ಪಾಸ್ ಬುಕ್ ಸೇರಿ ಹಲವು ದಾಖಲೆಗಳ ಪರಿಶೀಲನೆಯನ್ನು ಇದೀಗ ನೆಡೆಸುತ್ತಿರುವ ಮಾಹಿತಿ ಲಭ್ಯವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price today: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ನನ್ನ ತಂಗಿ ಥರಾ ಸೇಫ್ ಆಗಿ ಕರ್ಕೊಂಡು ಹೋಗ್ತೀನಿ, ಭಯಪಡಬೇಡಿ: ಕ್ಯಾಬ್ ಡ್ರೈವರ್ ವಿಡಿಯೋ ಈಗ ಭಾರೀ ವೈರಲ್

ಅಪ್ರಾಪ್ತ ಸೋದರಳಿಯನನ್ನು ಬ್ಲ್ಯಾಕ್ ಮೇಲ್ ಮಾಡಿ ಕಾಮತೃಷೆ ತೀರಿಸಿಕೊಳ್ತಿದ್ದ 40 ವರ್ಷ ಅತ್ತೆ: ಕೊನೆಗೆ ಏನಾಯ್ತು video

Video: ವರುಣಾರ್ಭಟಕ್ಕೆ ಬೆಚ್ಚಿದ ವಾಣಿಜ್ಯ ನಗರಿ: ಮಹಾಮಳೆಗೆ ಮುಂಬೈನಲ್ಲಿ ಜನಜೀವನ ಅಸ್ತವ್ಯಸ್ತ

600 ಕೋಟಿ ಶ್ರೀಮಂತಿಕೆ, ಸ್ಪುರದ್ರೂಪಿಯಾಗಿದ್ರೂ ಕೇತನ್ ಅಗರ್ವಾಲ್ ಕೊಲ್ಲಲು ಸಿಯಾಗೆ ಹೇಗೆ ಮನಸ್ಸು ಬಂತು

ಮುಂದಿನ ಸುದ್ದಿ
Show comments