Publish Date: Sat, 09 Oct 2021 (20:40 IST)
Updated Date: Sat, 09 Oct 2021 (20:42 IST)
ಬೆಂಗಳೂರು: ನಗರದಲ್ಲಿ ನೆಡೆಯುತ್ತಿರುವ ಐಟಿ ದಾಳಿಯ ಬಳಿಕ ಈಗ ಇ.ಡಿ ಭಯ ಟ್ಯಾಕ್ಸ್ ಕಳ್ಳರಿಗೆ ಹಾಗೂ ಅಕ್ರಮ ಹಣ ಸಂಪಾದಿಸಿದ್ದ ಭಾರಿ ಕುಳಗಳಿಗೆ ಶುರುವಾಗಿದೆ. ಎರಡು ದಿನಗಳಿಂದ ಬೆಂಗಳೂರಿನಲ್ಲಿ ನಡೆದಿರುವ ಐಟಿ ದಾಳಿ ಇಂದೂ ಸಹ ಮುಂದುವರೆಯಲಿದೆ ಎಂದು ಮೂಲಗಳು ತಿಳಿಸಿವೆ.
ಬಿಎಸ್ ವೈ ಅಪ್ತ ಉಮೇಶ್, ಚಾರ್ಟೆಡ್ ಅಕೌಂಟೆಂಟ್ ಗಳು ಹಾಗೂ ಕಂಟ್ರಾಕ್ಟರ್ ಗಳ ಮೇಲೆ ನಡೆದಿದ್ದ ದಾಳಿಯಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ಪತ್ತೆಯಾಗಿದೆ. ಪಿ.ಎಂ.ಎಲ್.ಎ ಕಾಯ್ದೆಯನ್ನು ಉಲ್ಲಂಘಿಸಿರುವುದು ಐಟಿ ದಾಳಿ ವೇಳೆ ಬೆಳಕಿಗೆ ಬಂದಿದೆ. ತೆರಿಗೆ ವಂಚನೆ ಜೊತೆ ಜೊತೆಗೆ ಆಕ್ರಮ ಹಣ ಮತ್ತು ಸಂಪತ್ತು ಸಂಗ್ರಹಿಸಿರುವ ಹಲವು ಕಂಟ್ರಾಕ್ಟರ್ ಗಳ ವಿರುದ್ಧ ಕ್ರಮ ಕೈಗೊಳ್ಳಲು ಮತ್ತು ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ತಲುಪಿಸಲು ಶೀಘ್ರವೇ ಐಟಿಯಿಂದ ಇ.ಡಿ ಗೆ ಪತ್ರ ರಾವನೆಯಾಗಲಿದೆ. ಈ ಹಿನ್ನೆಲೆಯಲ್ಲಿ ಹಲವು ಕಂಟ್ರಾಕ್ಟರ್ ಗಳಿಗೆ ನಡುಕ ಶುರುವಾಗಿದೆ ಎನ್ನಲಾಗುತ್ತಿದೆ.
ಮೂರನೇ ದಿನವೂ ಮುಂದುವರೆದ ಐಟಿ ರೇಡ್:
ಸತತ 48 ಘಂಟೆಗಳಿಂದ ನಡೆಯುತ್ತಿರುವ ಐಟಿ ಸರ್ಚ್ ಇಂದೂ ಮುಂದುವರೆದಿದೆ. ಉಮೇಶ್ ಆಪ್ತ ಸೋಮಶೇಖರ್ ಮನೆಯನ್ನು ಜಾಲಾಡಿ ಕಡತಗಳನ್ನು ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಗುರುವಾರ ರಾತ್ರಿ ಸೋಮಶೇಖರ್ ಮನೆಯಲ್ಲೇ ಐಟಿ ಅಧಿಕಾರಿಗಳು ಮೊಕ್ಕಾಂ ಹೂಡಿದ್ದರು ಎನ್ನುವ ಮಾಹಿತಿ ದೊರೆತಿದೆ.
ಉಮೇಶ್ ಗೆ ಅತ್ಯಾಪ್ತಾನಾಗಿದ್ದ ಕ್ಲಾಸ್ 1 ಗುತ್ತಿಗೆದಾರ ಸೋಮಶೇಖರ್ ನೀರಾವರಿ ನಿಗಮದ ಹಲವು ಕಾಂಟ್ರಾಕ್ಟ್ ಗಳನ್ನು ಪಡೆಯುತ್ತಿದ್ದ. ಇಬ್ಬರ ನಡುವೆ ಹಲವು ಅಕ್ರಮ ವ್ಯವಹಾರಗಳು ನಡೆದಿರುವ ಬಗ್ಗೆ ಮಾಹಿತಿಯನ್ನು ಐಟಿ ಆಫೀಸರ್ಸ್ ಕೆಲೆ ಹಾಕುತ್ತಿದ್ದಾರೆ.ಸೋಮಶೇಖರ್ ಬ್ಯಾಂಕ್ ಪಾಸ್ ಬುಕ್ ಸೇರಿ ಹಲವು ದಾಖಲೆಗಳ ಪರಿಶೀಲನೆಯನ್ನು ಇದೀಗ ನೆಡೆಸುತ್ತಿರುವ ಮಾಹಿತಿ ಲಭ್ಯವಾಗಿದೆ.
geetha
Publish Date: Sat, 09 Oct 2021 (20:40 IST)
Updated Date: Sat, 09 Oct 2021 (20:42 IST)