Publish Date: Wed, 16 Aug 2023 (14:30 IST)
Updated Date: Wed, 16 Aug 2023 (18:01 IST)
ಮಾಜಿ ಸಿಎಂ ಕುಮಾರಸ್ವಾಮಿ ಅವರು ವಿರೋಧ ಪಕ್ಷದಲ್ಲಿ ಇದ್ದಾರೆ. ಅವರು ಟೀಕೆ ಟಿಪ್ಪಣಿ ಮಾಡೋದಕ್ಕೆ ನಮಗೇನು ಅಭ್ಯಂತರ ಇಲ್ಲ ಅಂತಾ ಸಚಿವ ಪರಮೇಶ್ವರ ಹೇಳಿದ್ದಾರೆ.. ಬೆಂಗಳೂರಿನಲ್ಲಿ ಮಾತನಾಡಿದ ಅವರು,ಅವರಿಗೆ ಟೀಕೆ ಮಾಡೋ ಹಕ್ಕಿದೆ. ನಮ್ಮನ್ನ ತಿದ್ದುವ ಹಕ್ಕು ಅವರಿಗಿದೆ. ಆದರೆ ಇಲ್ಲಸಲ್ಲದ ಆರೋಪ ಮಾಡೋದು, ದಾಖಲಾತಿ ಇಲ್ಲದೆ ಮಾತಾಡೋದು ಸರಿಯಲ್ಲ ಎಂದಿದ್ದಾರೆ.. ಅವರು ಎರಡು ಬಾರಿ ಸಿಎಂ ಆದವರು. ಅವರು ಮಾತಾಡಿದ್ರೆ ಜನ ಗಮನಿಸುತ್ತಾರೆ. ಹೌದಪ್ಪ ಇವರು ಹೇಳೋದ್ರಲ್ಲಿ ಸತ್ಯ ಇರುತ್ತೆ ಅಂತ ಜನ ನಂಬ್ತಾರೆ. ಆದರೆ ಅವರು ಆರೋಪ ಮಾಡಿ ದಾಖಲಾತಿ ಬಿಡುಗಡೆ ಮಾಡದೇ ಹೋದ್ರೆ ಗೌರವ ಸಿಗಲ್ಲ ಅಂತಾ
ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಸಚಿವ ಪರಮೇಶ್ವರ್ ಕಿಡಿಕಾರಿದ್ದಾರೆ.