Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಉಡುಪಿ ಕೇಸ್ ಬಗ್ಗೆ ಪರಮೇಶ್ವರ್ ಪ್ರತಿಕ್ರಿಯೆ ಏನು?

ಉಡುಪಿ ಕೇಸ್ ಬಗ್ಗೆ ಪರಮೇಶ್ವರ್ ಪ್ರತಿಕ್ರಿಯೆ ಏನು?
ಬೆಂಗಳೂರು , ಶುಕ್ರವಾರ, 28 ಜುಲೈ 2023 (11:58 IST)
ಬೆಂಗಳೂರು : ಕಾಲೇಜುಗಳಲ್ಲಿ ಸ್ನೇಹಿತರ ನಡುವೆ ಕೆಲ ಘಟನೆಗಳು ನಡೆಯುತ್ತದೆ. ಅದನ್ನು ಎಲ್ಲಿಗೋ ತೆಗೆದುಕೊಂಡು ಹೋಗೋದಲ್ಲ. ಅದನ್ನು ಕಾಲೇಜು ಪ್ರಾಂಶುಪಾಲರಿಗೆ ಬಿಡಬೇಕು. ಅದನ್ನು ಮೀರಿದ ಘಟನೆ ಏನಾದ್ರೂ ಆದರೆ ನಾವು ಮುಂದೆ ಹೋಗಬೇಕು ಎಂದು ಗೃಹಸಚಿವ ಜಿ. ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.
 
ಉಡುಪಿ ಖಾಸಗಿ ಕಾಲೇಜಿನಲ್ಲಿ ಮಹಿಳೆಯರ ಟಾಯ್ಲೆಟ್ನಲ್ಲಿ ವೀಡಿಯೋ ಚಿತ್ರೀಕರಣ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸುವ ವಿಚಾರವಾಗಿ ಮಾತನಾಡಿದ ಅವರು, ಈಗಾಗಲೇ ಘಟನೆ ನಡೆದ ಕಾಲೇಜಿನ ಆಡಳಿತ ವೀಡಿಯೋ ಚಿತ್ರೀಕರಣ ಮಾಡಿದ ವಿದ್ಯಾರ್ಥಿನಿಯರ ವಿರುದ್ಧ ಕ್ರಮ ಕೈಗೊಂಡಿದೆ. ಅವರನ್ನು ಸಸ್ಪೆಂಡ್ ಮಾಡಿದ್ದಾರೆ.

ಯುನಿವರ್ಸಿಟಿ ಕಮಿಷನ್ ಆ್ಯಂಟಿ ರ್ಯಾಗಿಂಗ್ ಕಮಿಟಿ ಮಾಡಿದೆ. ನಾವು ಅಲ್ಲಿ ಹ್ಯಾಂಡಲ್ ಮಾಡಬಹುದು. ಯಾವಾಗ ಇದನ್ನು ಹೆಚ್ಚಿನ ರೀತಿಯಲ್ಲಿ ಬಿಂಬಿಸಲು ಹೊರಟ್ರು. ಪೊಲೀಸರು ಸತ್ಯಾಸತ್ಯತೆ ನೋಡೋದಾಗಿ ಹೇಳಿದ್ದಾರೆ. ನಾನು ಕೂಡಾ ಸತ್ಯಾಸತ್ಯತೆ ತಿಳಿಯಲು ಸೂಚಿಸಿದ್ದೇನೆ ಎಂದು ತಿಳಿಸಿದರು.

ನಾನು ಇದನ್ನು ಸಣ್ಣ ಘಟನೆ ಎಂದು ಹೇಳಿರುವ ಅರ್ಥ ಕಾಲೇಜಿನ ವಿಚಾರ ಎಂಬುದು. ಅದನ್ನು ಬೇರೆ ರೀತಿಯಲ್ಲಿ ಅರ್ಥೈಸುವ ಅಗತ್ಯವಿಲ್ಲ. ಇದು ಸಾಮಾನ್ಯವಾಗಿ ನಡೆದ ಘಟನೆ. ಯಾವುದೇ ಸಂಘ ಸಂಸ್ಥೆಗಳಾಗಬಹುದು. ವೈಯಕ್ತಿಕವಾಗಿ ಶಾಸಕರು, ಸಂಸದರು ಪತ್ರ ಕೊಟ್ಟಾಗ ಬಹಳಷ್ಟು ಅಮಾಯಕರಿದ್ದಾರೆ ಅವರ ಬಿಡುಗಡೆ ಆಗಬೇಕು ಎಂಬ ಮನವಿ ಬಂತು. ಅದನ್ನು ಏಕಾಏಕಿ ತೆಗೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಸಂಜಯ್ ಕುಮಾರ್ ಮಿಶ್ರಾ ಅಧಿಕಾರಾವಧಿ ವಿಸ್ತರಣೆಗೆ ಸುಪ್ರೀಂ ಸಮ್ಮತಿ