Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬಜೆಟ್ ನಲ್ಲಿ ಸತ್ಯ ಎನ್ನುವುದೇ ಇಲ್ಲ ಎಂದವರಾರು?

ಬಜೆಟ್ ನಲ್ಲಿ ಸತ್ಯ ಎನ್ನುವುದೇ ಇಲ್ಲ ಎಂದವರಾರು?
ಲಖನೌ , ಶುಕ್ರವಾರ, 1 ಫೆಬ್ರವರಿ 2019 (17:01 IST)
ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸಿರುವ ಮಧ್ಯಂತರ ಬಜೆಟ್ ಒಂದು ಸುಳ್ಳಿನ ಕಂತೆ ಎಂದಿರುವ ಬಣ್ಣಿಸಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಬಜೆಟ್ನಲ್ಲಿ ಎಲ್ಲವೂ ಇದೆ, ಸತ್ಯವೊಂದನ್ನು ಬಿಟ್ಟು ಎಂದು ದೂರಿದ್ದಾರೆ. 

ದೇಶದ ಪ್ರತಿ ವಲಯಗಳು ಕುಸಿತ ಕಂಡಿರುವಾಗ ಇಂತಹ ಬಜೆಟ್ಗಳನ್ನು ಮಂಡಿಸಿ ಏನು ಪ್ರಯೋಜನ? ಎಂದು ಅವರು ತಮ್ಮ ಟ್ವೀಟ್ನಲ್ಲಿ ಪ್ರಶ್ನಿಸಿದ್ದಾರೆ.

ಕೇಂದ್ರ ಸರ್ಕಾರ ಕೇವಲ ಸುಳ್ಳು ಭರವಸೆಗಳನ್ನು ನೀಡಿದೆ. ಭೂಮಿರಹಿತ ರೈತರು ಹಾಗೂ ಕಾರ್ಮಿಕರಿಗೆ ಯಾವುದೇ ಯೋಜನೆಗಳಿಲ್ಲ. ಸರ್ಕಾರ ತಮ್ಮ ಎಲ್ಲ ಉತ್ತಮ ಕೆಲಸಗಳನ್ನು ಬಿಂಬಿಸಲು ಯತ್ನಿಸಿದೆ. ಆದರೆ, ಜನರು ಬಿಜೆಪಿಯ ಸುಳ್ಳು ಭರವಸೆಗಳಿಂದ ರೋಸಿ ಹೋಗಿದ್ದಾರೆ.

ಐದು ವರ್ಷಗಳ ನೋವು, ದೌರ್ಜನ್ಯಗಳನ್ನು ಕಂಡಿರುವ ರೈತರು, ವರ್ತಕರು, ನಿರುದ್ಯೋಗಿ ಯುವಕರು ಬಿಜೆಪಿಯಿಂದ ಮುಕ್ತಿ ಬಯಸಿದ್ದಾರೆ. ಈಗ ಕೇಂದ್ರದ ಬಜೆಟ್   ಕಣ್ಣೊರೆಸುವ ಘೋಷಣೆಗಳಿಗೆ ಅವರು ಮರುಳಾಗುವುದಿಲ್ಲ ಎಂದರು.



Share this Story:

Follow Webdunia kannada

ಮುಂದಿನ ಸುದ್ದಿ

ಅಸಂಘಟಿತ ಕಾರ್ಮಿಕರಿಗೆ ಪಿಂಚಣಿ ಯೋಜನೆ