Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ವಂಚನೆ ಪ್ರಕರಣದಲ್ಲಿದ್ದಾರಾ ಸುನೀಲ್ ಕುಮಾರ್?

ವಂಚನೆ ಪ್ರಕರಣದಲ್ಲಿದ್ದಾರಾ ಸುನೀಲ್ ಕುಮಾರ್?
bangalore , ಶನಿವಾರ, 16 ಸೆಪ್ಟಂಬರ್ 2023 (17:00 IST)
ಚೈತ್ರಾ ಆ್ಯಂಡ್ ಗ್ಯಾಂಗ್ 5 ಕೋಟಿ ವಂಚನೆ ಮಾಡಿರುವುದು ಆಡಿಯೋದಲ್ಲಿ ಸಾಬೀತಾಗಿದ್ದು, ಆಡಿಯೋದಲ್ಲಿ ಸುನೀಲ್‌ ಕುಮಾರ್ ಹೆಸರನ್ನ ಪ್ರಸ್ತಾಪಿಸಿದ್ದಾರೆ. ಈ ಹಿನ್ನೆಲೆ ಮಾಜಿ ಸಚಿವ ಸುನೀಲ್ ಕುಮಾರ್ ಸಹ ಈ ಗ್ಯಾಂಗ್​​ನಲ್ಲಿದ್ದಾರಾ ಎಂಬ ಅನುಮಾನ ಮೂಡಿದೆ. ಆಡಿಯೋದಲ್ಲಿ ಕಾರ್ಕಳ ಎಂದ ಕೂಡಲೇ ಸುನೀಲ್‌ ಕುಮಾರ್ ಮನೆ ಎಂದು ಚೈತ್ರಾ ಹೇಳಿದ್ದಾಳೆ. ಸುನೀಲ್ ಕುಮಾರ್ ಹೆಸರು ಹೇಳಿ‌ ಕಬಾಬ್ ಗ್ಯಾಂಗ್ ಹಣ ಪಡೆದಿದ್ಯಾ ಎಂಬ ದಟ್ಟ ಅನುಮಾನ ಈಗ ಪೊಲೀಸರಲ್ಲಿ ಮೂಡಿದೆ. ಸಿಸಿಬಿ‌ ಪೊಲೀಸರು ನಿನ್ನೆ ಮೂರು ಕಡೆ ಸ್ಥಳ ಮಹಜರು ನಡೆಸಿದ್ದು, ಮಂಗಮ್ಮನಪಾಳ್ಯದಲ್ಲಿರುವ ಗೋವಿಂದ ಬಾಬು ಪೂಜಾರಿ ಕಚೇರಿ, ವಿಜಯನಗರದಲ್ಲಿರುವ ಅಭಿನವ ಹಾಲಶ್ರೀ ನಿವಾಸ, ಕೆ.ಕೆ ಗೆಸ್ಟ್ ಹೌಸ್ ಸೆಕೆಂಡ್ ಫ್ಲೋರ್​​​ನಲ್ಲಿರುವ 207ನೇ ನಂಬರ್​​ನ ರೂಂನ್ನ ಕೂಡ ಮಹಜರು ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚೈತ್ರಾ ಆಸ್ಪತ್ರೆಯಲ್ಲಿ, ಉಳಿದವರಿಗೆ ಸಿಸಿಬಿ ಡ್ರಿಲ್