Publish Date: Fri, 02 Jun 2023 (20:45 IST)
Updated Date: Fri, 02 Jun 2023 (19:33 IST)
ಪ್ರಯಾಣಿಕರಿಂದ ಒಂದೇ ತಿಂಗಳಲ್ಲಿ ಲಕ್ಷ ಲಕ್ಷ ದಂಡ ವಸೂಲಿಯನ್ನ ಕೆ ಎಸ್ ಆರ್ ಟಿ ಸಿ ನಿಗಮ ಮಾಡಿದೆ.ಏಪ್ರಿಲ್ ತಿಂಗಳ ಮಾಹೆಯಲ್ಲಿ 5,54,832 ರೂಪಾಯಿಯನ್ನ ಸಾರಿಗೆ ನಿಗಮ ವಸೂಲಿ ಮಾಡಿದೆ.44540 ವಾಹನಗಳನ್ನು ತನಿಖೆಗೊಳಪಡಿಸಿ 3070 ಪ್ರಕರಣಗಳನ್ನು ಇಲಾಖೆ ಪತ್ತೆಹಚ್ಚಿದೆ.3,415 ಮಂದಿಯಿಂದ KSRTC ನಿಗಮದ ತನಿಖಾ ಅಧಿಕಾರಿಗಳು ದಂಡ ವಸೂಲಿ ಮಾಡಿದ್ದಾರೆ.ನಿಗಮದ ಆದಾಯದಲ್ಲಿ ಸೋರಿಕೆ ಆಗುತ್ತಿದ್ದ 2,38,803/- ರೂ ಗಳನ್ನು ತನಿಖಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ.ತಪ್ಪಿತಸ್ಥರ ವಿರುದ್ಧ ಸೂಕ್ತ ಶಿಸ್ತಿನ ಕ್ರಮದ ಬಗ್ಗೆ KSRTC ನಿಗಮದ ಮುಖ್ಯ ಸಂಚಾರ ವ್ಯವಸ್ಥಾಪಕರಿಂದ ಮಾಹಿತಿ ನೀಡಲಾಗಿದೆ.