Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಈರುಳ್ಳಿ ಬೆಲೆ ಕುಸಿತ- 500-600 ರೂ.ಗೆ ಕ್ವಿಂಟಲ್ ಈರುಳ್ಳಿ ಮಾರಾಟ..!

ಈರುಳ್ಳಿ ಬೆಲೆ ಕುಸಿತ- 500-600 ರೂ.ಗೆ ಕ್ವಿಂಟಲ್ ಈರುಳ್ಳಿ ಮಾರಾಟ..!
bangalore , ಶುಕ್ರವಾರ, 2 ಜೂನ್ 2023 (20:23 IST)
ಕಳೆದ ಒಂದು ತಿಂಗಳಿಂದ ಈರುಳ್ಳಿ ಬೆಲೆ ಏಕಾಏಕಿ ಕುಸಿತವಾಗುತ್ತಿದೆ.  ಈರುಳ್ಳಿ ಬೆಳಗಾರರಿಗೆ  ಸಂಕಷ್ಟ ಎದುರಾಗಿದೆ. ಏಕಾಏಕಿ ಸೋಮವಾರ , ದುಪ್ಪಟ್ಟು ಪ್ರಮಾಣ ಈರುಳ್ಳಿ ಮಾರುಕಟ್ಟೆಗೆ ಬಂದಿದೆ. ಹೆಚ್ಚು ಈರುಳ್ಳಿ ಮಾರುಕಟ್ಟೆಗೆ  ಬಂದಿರುವ  ಕಾರಣ  ಬೆಲೆ ಕುಸಿತವಾಗಿದೆ. ಇದರಿಂದ  ಈರುಳ್ಳಿ ಬೆಳೆಗಾರರಿಗೆ ಸಂಕಷ್ಟ ಎದುರಾಗಿದೆ.
 
ಕಳೆದ ವಾರ ಮಳೆಯಾಗಿದ್ದು, ಈರುಳ್ಳಿ ದೊಡ್ಡ ಪ್ರಮಾಣದಲ್ಲಿ ರಾಜಧಾನಿಯ ಮಾರುಕಟ್ಟೆಗೆ ಬರುತ್ತಿದೆ. ಪಿಎಂಸಿಯಲ್ಲಿ ಉತ್ತಮ ಗುಣಮಟ್ಟದ ಈರುಳ್ಳಿ ಕೆ.ಜಿಗೆ 5-10 ರೂ. ಗೆ ಮಾರಾಟವಾಗುತ್ತಿದ್ದು, ಕಳಪೆ ಈರುಳ್ಳಿ ಬೆಲೆ 3-5 ದರದಲ್ಲಿ ಹರಾಜು ಹಾಕಲಾಗುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಗುಣಮಟ್ಟದ ಈರುಳ್ಳಿಗೆ ಕೆಜಿಗೆ 10- 12 ರೂ. ಗೆ ಮಾರಾಟವಾಗುತ್ತಿದ್ದು, ಕಳಪೆ ಈರುಳ್ಳಿಗೆ  05-10 ರೂ. ಮಾತ್ರವೇ ಬೆಲೆಯಿದೆ. ಬೆಲೆ ಕೇಳಿ  ರೈತರು ಹಾಗೂ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ.
 
ನಗರದ ಯಶವಂತಪುರ ಹಾಗೂ ದಾಸರಹಳ್ಳಿ ಎಪಿಎಂಸಿಗೆ  ಹೆಚ್ಚು ಈರುಳ್ಳಿ ಬರುತ್ತಿದೆ.ಆದ ಕಾರಣ   ಈರುಳ್ಳಿ ಬೆಲೆ ಇಳಿಕೆಯಾಗಿದೆ. ಏಕಾಏಕಿ ಕಳೆದ ಒಂದು ವಾರದಿಂದ  ದುಪ್ಪಟ್ಟು ಪ್ರಮಾಣದಲ್ಲಿ ಈರುಳ್ಳಿ ಬರುತ್ತಿದ್ದು, ಕಡಿಮೆ ಗುಣಮಟ್ಟದ ಹೆಚ್ಚು ಈರುಳ್ಳಿ ಬಂದಿರುವ ಕಾರಣಕ್ಕೆ ಬೆಲೆ  ಏಕಾಏಕಿ ಕುಸಿತವಾಗಿದೆ. ರಾಜ್ಯದಲ್ಲಿ ಹೇಚ್ಚು ಮಳೆ ಬರುತ್ತಿರುವ ಕಾರಣ , ರೈತರು ಬೆಳೆ ನಾಶದ ಭಯದಿಂದ ಈರುಳ್ಳಿಯನ್ನು ಹೊರತೆಗೆದು ಮಾರುಕಟ್ಟೆಗೆ ತರುತ್ತಿದ್ದಾರೆ. ಸೀಸನ್ ಅಲ್ಲದ ಸಾಮಾನ್ಯ ದಿನಗಳಲ್ಲಿ ಗರಿಷ್ಠ 30ರಿಂದ 35 ಸಾವಿರ ಚೀಲ ಈರುಳ್ಳಿ ಬರುತ್ತದೆ.
 
ಒಟ್ನಲ್ಲಿ ಮಳೆ ಕಾರಣಕ್ಕೆ ಈರುಳ್ಳಿ ಬೆಲೆ ಕಡಿಮೆಯಾಗಿದೆ ಎಂದು ವ್ಯಾಪರಸ್ಥರು ಹೇಳುತ್ತಿದ್ದಾರೆ.  ಈರುಳ್ಳಿ ಬೆಳೆಗಾರರಿಗೆ ನಷ್ಟ ಆಗುತ್ತಿದೆ. ಖರ್ಚು ಹೆಚ್ಚಾಗುತ್ತಿದೆ ಖರ್ಚಿಗೆ ತಕ್ಕ ಬೆಲೆ ಸಿಗುತ್ತಿಲ್ಲ ಎಂದು  ಈರುಳ್ಳಿ ಬೆಳೆಗಾರರಿಗೆ ಸಂಕಷ್ಟ ಎದುರಸುತ್ತಿದ್ದಾರೆ. ಆದ್ರೆ ಮುಂದಿನ ದಿನಗಳಲ್ಲಿ ಒಂದು ವೇಳೆ ಮಳೆ ಹೀಗೆ ಬಂದಲ್ಲಿ ಈರುಳ್ಳಿ ಬೆಳೆ ಗಗನಕ್ಕೆ ಏರೋದಂತು ಫಿಕ್ಸ್ ಅಂತಿದ್ದಾರೆ ವ್ಯಾಪಾರಸ್ಥರು.
 

Share this Story:

Follow Webdunia kannada

ಮುಂದಿನ ಸುದ್ದಿ

ಪೀಣ್ಯ ಪ್ಲೈವೋರ್ ಮೇಲೆ ಕೇಬಲ್ ಅಳವಡಿಕೆ ಶುರು