Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಭಾರತೀಯ ರೈಲ್ವೆ ಇಲಾಖೆಯಿಂದ ವಿವಿಧ ರಾಜ್ಯಗಳ 240 ರೈಲುಗಳ ಸಂಚಾರ ರದ್ದು

ಭಾರತೀಯ ರೈಲ್ವೆ ಇಲಾಖೆಯಿಂದ ವಿವಿಧ ರಾಜ್ಯಗಳ 240 ರೈಲುಗಳ ಸಂಚಾರ ರದ್ದು
bangalore , ಮಂಗಳವಾರ, 22 ಮಾರ್ಚ್ 2022 (20:59 IST)
ಕಾರ್ಯಾಚರಣೆ ಮತ್ತು ನಿರ್ವಹಣೆ ಕಾರಣಗಳಿಂದಾಗಿ ಭಾರತೀಯ ರೈಲ್ವೆ ಇಲಾಖೆ (Indian Railways) ಇಂದು (ಮಂಗಳವಾರ) 240ಕ್ಕೂ ಹೆಚ್ಚು ರೈಲುಗಳ ಸಂಚಾರವನ್ನು ರದ್ದುಗೊಳಿಸಿದೆ. ರೈಲ್ವೆ ಇಲಾಖೆಯ (Railway Department) ಅಧಿಸೂಚನೆ ಪ್ರಕಾರ, ಇಂದು ಹೊರಡಬೇಕಿದ್ದ 211 ರೈಲುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ ಮತ್ತು 29 ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ. ಹಾಗೇ, ಇಂದಿನ 14 ರೈಲುಗಳ ವೇಳಾಪಟ್ಟಿಯನ್ನು ರೀಶೆಡ್ಯೂಲ್ ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
 
ದೆಹಲಿ, ಮಹಾರಾಷ್ಟ್ರ, ಗುಜರಾತ್, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಜಾರ್ಖಂಡ್, ಕರ್ನಾಟಕ, ಮಧ್ಯಪ್ರದೇಶ, ತೆಲಂಗಾಣ, ಆಂಧ್ರಪ್ರದೇಶ, ಒಡಿಶಾ, ಪಂಜಾಬ್, ಅಸ್ಸಾಂ ಮತ್ತು ಬಿಹಾರದಲ್ಲಿ ಸಂಚರಿಸುತ್ತಿದ್ದ ರೈಲುಗಳು ರದ್ದಾಗಿವೆ ಎಂಬುದನ್ನು ರೈಲು ಪ್ರಯಾಣಿಕರು ಗಮನಿಸಬೇಕು.ಇಂದು ಸಂಪೂರ್ಣವಾಗಿ ರದ್ದಾದ ರೈಲುಗಳ ಸಂಪೂರ್ಣ ಪಟ್ಟಿ ಹೀಗಿದೆ…
03085, 0309, 0330, 03530, 03411, 03529, 03530, 03578, 03591, 03592, 04325, 04326, 04376, 04394, 04620, 05245, 05331, 05364, 055366, 05701, 05750, 07321, 07331, 07378, 07337, 07778, 07795, 07796, 07795, 07796, 07906, 07907, 08303, 08304, 08437, 08438, 09110, 09113, 09440, 09444, 10101, 10102, 1286, 13027, 15778, 1730, 17304, 173731, 17320, 18413, 18414, 20948, [31, 31, 31, 31, 31, 31, 31, 31, 31, 31, 31, 31, 31, 31, 31, 31, 31, 31, 31, 31, 31, 31, 31, 32213, 33311, 33512, 33514, 33651, 33711, 33712, 33811, 33812, 33813, 33814, 33815, 34111, 34112, 34114, 34352, 34411, 34412, 34511, 34513, 34711, 34712, 34713, 34714, 34715, 34717, 34791, 34811, 34812, 34813,34914, 34935, 34937, 34981, 366812, 36813, 36814, 37213, 37214, 37216, 37246, 37253, 37281, 37283, 37284, 37286, 37287, 37287, 37287, 37289, 37290, 37308, 37309, 37307, 37314, 373330, 37335, 37338, 37343, 37348, 37354, 37371, 37385, 37386, 37412, 37522, 37611, 377742, 377743, 37781, 37782, 37781, 37782, 37781, 37812, 37811, 37812, 37812, 38302, 38304, 38306, 38402, 38404, 38408, 38702, 38703, 38704, 38801, 38802, 38803, 52965, 52966
 
ರದ್ದಾದ ರೈಲುಗಳ ಸಂಪೂರ್ಣ ಪಟ್ಟಿಯನ್ನು ಹೇಗೆ ಪರಿಶೀಲಿಸುವುದು ಎಂಬ ಕುರಿತು ಹಂತ-ಹಂತದ ಮಾಹಿತಿ ಇಲ್ಲಿದೆ:
* ಹಂತ 1: enquiry.indianrail.gov.in/mntes ವೆಬ್​ಸೈಟ್​ಗೆ ಭೇಟಿ ನೀಡಿ ಮತ್ತು ಪ್ರಯಾಣದ ದಿನಾಂಕವನ್ನು ಆಯ್ಕೆ ಮಾಡಿ.
* ಹಂತ 2: ಸ್ಕ್ರೀನ್ ಮೇಲಿನ ಪ್ಯಾನೆಲ್‌ನಲ್ಲಿ ಎಕ್ಸೆಪ್ಷನಲ್ ಟ್ರೈನ್ಸ್​ ಎಂಬುದನ್ನು ಆಯ್ಕೆ ಮಾಡಿ.
* ಹಂತ 3: ರದ್ದುಗೊಂಡ ರೈಲುಗಳ ಆಯ್ಕೆಯನ್ನು ಕ್ಲಿಕ್ ಮಾಡಿ.
* ಹಂತ 4: ಸಮಯ, ಮಾರ್ಗಗಳು ಮತ್ತು ಇತರ ವಿವರಗಳೊಂದಿಗೆ ರೈಲುಗಳ ಸಂಪೂರ್ಣ ಪಟ್ಟಿಯನ್ನು ನೋಡಲು ಸಂಪೂರ್ಣ (Fully) ಅಥವಾ ಭಾಗಶಃ (Partially) ಆಯ್ಕೆಯನ್ನು ಕ್ಲಿಕ್ ಮಾಡಿ.
 
ಹೆಚ್ಚಿನ ಮಾಹಿತಿಗಾಗಿ, enquiry.indianrail.gov.in/mntes ಅಥವಾ NTES ಅಪ್ಲಿಕೇಶನ್‌ಗೆ ಭೇಟಿ ನೀಡುವಂತೆ ರೈಲ್ವೆ ಅಧಿಕಾರಿಗಳು ಪ್ರಯಾಣಿಕರ ಬಳಿ ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಿನ್ನದ ಬೆಲೆ ಬಲು ದುಬಾರಿ ಆಭರಣ ಪ್ರೀಯರಿಗೆ ಶಾಕ್