Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೋವಿಡ್ ನಿಯಮ ಯಾವ ಯಾವ ಇಲಾಖೆಯಲ್ಲಿ ಪಾಲನೆಯಾಗುತ್ತಿದೆ..!

ಕೋವಿಡ್ ನಿಯಮ ಯಾವ ಯಾವ ಇಲಾಖೆಯಲ್ಲಿ ಪಾಲನೆಯಾಗುತ್ತಿದೆ..!
bangalore , ಬುಧವಾರ, 8 ಸೆಪ್ಟಂಬರ್ 2021 (18:59 IST)
ಸಾಮಾನ್ಯವಾಗಿ ಅನುಭವ ಪಾಠ ಕಲಿಸುತ್ತದೆ. ಆದರೆ, ಸಾವು ಆ ಪಾಠವನ್ನು ಕಲಿತಂತಿಲ್ಲ. ಅದೇ ತಪ್ಪುಗಳು ಪುನರಾವರ್ತನೆಯಾಗುತ್ತಲೇ ಇವೆ. ಕೊರೊನಾ ಸೋಂಕು ಪ್ರಕರಣಗಳು ಕಡಿಮೆಯಾದಂತೆ ಮುಂಜಾಗ್ರತಾ ಕ್ರಮಗಳು ಕೂಡ ಮರೆಯಾಗುತ್ತಾ ಹೋಗುತ್ತದೆ. ಆದರೆ, ನೆನಪಿರಲಿ ಸಾಂಕ್ರಾಮಿಕ ಮಹಾಮಾರಿ ಸಂದರ್ಭದಲ್ಲಿ `ಎಲ್ಲರೂ ಸುರಕ್ಷಿತವಾಗುವವರೆಗೂ, ಯಾರೊಬ್ಬರೂ ಸುರಕ್ಷಿತವಲ್ಲ'. ಎರಡು ಅಲೆಗಳು ನಮ್ಮನ್ನು ಅಪ್ಪಳಿಸಿ ಹೋದರೂ ಕನಿಷ್ಠ ಮುಂಜಾಗ್ರತಾ ಕ್ರಮಗಳಾದ ಥರ್ಮಲ್ ಸ್ಕಿöçÃನಿಂಗ್, ಸ್ಯಾನಿಟೈಸರ್ ಬಳಕೆ ಮರೀಚಿಕೆಯಾಗಿದೆ. ಅದರಲ್ಲೂ ನಿಯಮ ರೂಪಿಸಿ, ಜಾರಿಗೊಳಿಸುವ ಸರ್ಕಾರಿ ಕಚೇರಿಗಳಲ್ಲೇ ಪಾಲಿಸದಿರುವುದನ್ನು ಕಾಣಬಹುದು.
ನಗರದ ಪ್ರಮುಖ ಸಾರ್ವಜನಿಕ ತಾಣಗಳು, ಸರ್ಕಾರಿ ಕಚೇರಿಗಳು, ವಾಣಿಜ್ಯ ಮಳಿಗೆಗಳು, ಖಾಸಗಿ ಸಂಸ್ಥೆಗಳಲ್ಲಿ ಕೊರೊನಾ ಮುಂಜಾಗ್ರತಾ ಕ್ರಮಗಳ ಪಾಲನೆ ಕುರಿತು ರಿಯಾಲಿಟಿ ಚೆಕ್ ಈ ವಾರದ ಸುದ್ದಿಸುತ್ತಾಟ...
 
 
ಕೊರೊನಾ ಮಹಾಮಾರಿ ಆಗಮಿಸಿದ ನಂತರ ಸಾರ್ವಜನಿಕ ಸ್ಥಳಗಳು, ಕಚೇರಿ, ಸಂಸ್ಥೆಗಳ ಪ್ರದೇಶ ಸಂದರ್ಭದಲ್ಲಿ ಸೋಂಕಿನ ತೀವ್ರ ಲಕ್ಷಣ ಹೊಂದಿರುವವರ ಪತ್ತೆಗೆ ಥರ್ಮಲ್ ಸ್ಕಿöçÃನಿಂಗ್ ಕಡ್ಡಾಯಗೊಳಿಸಲಾಗಿದೆ. ಇದಕ್ಕಾಗಿಯೇ ಸರ್ಕಾರದಿಂದಲೂ ಅನುದಾನ ಮೀಸಲಿಟ್ಟು ಅಗತ್ಯ ಉಪಕರಣಗಳನ್ನು ನೀಡಲಾಗಿದೆ. ಸೋಂಕಿನ ಲಕ್ಷಣ ಹೊಂದಿರುವ ವ್ಯಕ್ತಿಯು ಸೋಂಕನ್ನು ಹೆಚ್ಚು ಪ್ರಸರಿಸುತ್ತಾನೆ. ಈ ಉಪಕರಣವು ದೇಹದ ಉಷ್ಣಾಂಶವು ಸಾಮಾನ್ಯಕಿಂತ ಹೆಚ್ಚಿದ್ದರೆ (36.1 ಡಿಗ್ರಿ ಸೆಲ್ಸಿಯಸ್) ಪತ್ತೆ ಮಾಡುತ್ತದೆ. 38 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ಉಷ್ಣಾಂಶ ಹೊಂದಿರುವ ವ್ಯಕ್ತಿಯು ವೈದ್ಯರ ತಪಾಸಣೆಗೆ ಸೂಚಿಸಿ ಪ್ರವೇಶ ನಿರಾಕರಿಸಲಾಗುತ್ತದೆ.  ಕೈಗಳ ಸ್ವಚ್ಛತೆಯೂ ಸೋಂಕಿನಿAದ ರಕ್ಷಣೆಗೆ ಪ್ರಮುಖವಾಗಿದ್ದು, ಈ ಹಿನ್ನೆಲೆ ಎಲ್ಲೆಡೆ ಸಾರ್ವಜನಿಕರಿಗೆ ಲಭ್ಯವಾಗುವಂತೆ ಕಚೇರಿಗಳ ಪ್ರವೇಶ ದ್ವಾರದಲ್ಲಿಯೇ ಸ್ಯಾನಿಟೈಸರ್ ವ್ಯವಸ್ಥೆಗೆ ಸೂಚಿಸಲಾಗಿತ್ತು. ಸಾಮಾಜಿಕ ಅಂತರ ಮತ್ತು ಮಾಸ್ಕ್ ಕಡ್ಡಾಯಗೊಳಿಸಲಾಗಿತ್ತು.
 
*ಶಕ್ತಿಸೌಧದಲ್ಲಿಯೇ ನಿಯಮಪಾಲನೆಯಾಗುತ್ತಿಲ್ಲ:
ಕೊರೊನಾ ಎರಡು ಅಲೆಗಳ ಅಬ್ಬರ ತಣ್ಣಗಾಗುತ್ತಿದ್ದರೂ, ಮೂರನೇ ಅಲೆಯ ಭೀತಿ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಈ ಬಗ್ಗೆ ತಜ್ಞರು ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದಾರೆ.
ಆದರೆ, ರಾಜ್ಯ ಸರ್ಕಾರದ ಶಕ್ತಿ ಕೇಂದ್ರದಲ್ಲಿ ಮಾತ್ರ ಕೊರೊನಾ ಮೂಲ ನಿಯಮಗಳ ಪಾಲನೆ ಮಾಡದೇ ನಿರ್ಲಕ್ಷö್ಯ ತೋರುತ್ತಿರುವುದು ಹೆಚ್ಚಾಗಿದೆ. ವಿಧಾನಸೌಧದ ನಾಲ್ಕೂ ದ್ವಾರಗಳಲ್ಲಿ  ಸ್ಯಾನಿಟೈಸರ್ ಮತ್ತು ಥರ್ಮಲ್ ಸ್ಕಿöçÃನಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಅದಕ್ಕಾಗಿ ಒಬ್ಬ ಸಿಬ್ಬಂದಿಯನ್ನೂ ಕೂಡಿಸಲಾಗಿದೆ. ಆದರೆ, ಈ ಗೇಟ್‌ಗಳ ಬಳಿ ಹಾದು ಹೋಗುವ ಸಾರ್ವಜನಿಕರು ಹಾಗೂ ಶಾಸಕರು ಮತ್ತು ಸಚಿವರ ಕಡ್ಡಾಯ ತಪಾಸಣೆ ಮತ್ತು ಥರ್ಮಲ್ ಸ್ಕಿöçÃನಿಂಗ್ ಮಾಡದೇ ಬಿಡುವುದು ಸಾಮಾನ್ಯವಾಗಿದೆ.
ವಿಕಾಸ ಸೌಧ ಹಾಗೂ ಬಹುಮಹಡಿ ಕಟ್ಟಡದಲ್ಲಿಯೂ ಯಾವುದೇ ರೀತಿಯ ಥರ್ಮಲ್ ಸ್ಕಿöçÃನಿಂಗ್ ಮಾಡದಿರುವುದು ಕಂಡು ಬರುತ್ತಿದೆ. ಅಲ್ಲದೇ ಬಹುಮಹಡಿ ಕಟ್ಟಡದ ಕೆಲವು ಗೇಟ್‌ಗಳ ಬಳಿ ಸ್ಯಾನಿಟೈಸರ್ ವ್ಯವಸ್ಥೆಯನ್ನೂ ಮಾಡದಿರುವುದು ಕಂಡು ಬಂದಿದೆ. ರಾಜ್ಯದ ಮೂಲೆ ಮೂಲೆಗಳಿಂದ ಬಹುಮಹಡಿ ಕಟ್ಟಡ, ವಿಕಾಸಸೌಧ ಹಾಗೂ ವಿಧಾನಸೌಧಕ್ಕೆ  ನಿತ್ಯ ಲಕ್ಷಾಂತರ ಮಂದಿ ಭೇಟಿ ನೀಡುತ್ತಾರೆ. ಇಲ್ಲಿಯೇ ಮುಂಜಾಗ್ರತಾ ಕ್ರಮ ಪಾಲನೆಯಾಗದಿರುವುದು ಸೋಂಕಿಗೆ ದಾರಿ ಮಾಡಿಕೊಟ್ಟಂತಾಗುತ್ತಿದೆ. ನಿಯಮ ರೂಪಿಸುವ, ಆದೇಶ ಮಾಡಿವ ಸ್ಥಳದಲ್ಲಿಯೇ ನಿಯಮ ಪಾಲನೆಯಾಗುತ್ತಿಲ್ಲ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ.
 
*ಪಾರ್ಸಲ್‌ಗಳಿಗೆ ಸ್ಯಾನಿಟೈಸರ್ ಇಲ್ಲ: ಪೋಸ್ಟ್ ಆಫೀಸ್ ನೇರ ಎಂಟ್ರಿ:
ಕೊರೊನಾ ಸಂದರ್ಭದಲ್ಲಿಯೂ ಅಂಚೆ ಸೇವೆ ನಿರಂತರವಾಗಿ ನೀಡುವ ಮೂಲಕ ಸಾರ್ವಜನಿಕರಿಗೆ ನೆರವಾಗಿದೆ. ಆದರೆ, ನಗರದ ಅಂಚೆ ಕಚೇರಿಗಳಲ್ಲಿಯೂ ಯಾವುದೇ ಮುಂಜಾಗ್ರತಾ ಕ್ರಮಗಳು ಪಾಲನೆಯಾಗುತ್ತಿಲ್ಲ. ಎಲ್ಲಾ ಶಾಖೆಗಳಲ್ಲಿಯೂ ಥರ್ಮಲ್ ಸ್ಕಾö್ಯನರ್‌ಗಳನ್ನು ನೀಡಿದ್ದರೂ ಬಳಕೆ ಮಾಡುತ್ತಿಲ್ಲ. ಪ್ರಧಾನ ಅಂಚೆ ಕಚೇರಿಯು ಇದಕ್ಕೆ ಹೊರತಾಗಿಲ್ಲ. ಅಲ್ಲದೆ, ಕಾಗದಗಳು, ಪಾರ್ಸಲ್ ಚೀಲಗಳು, ಪೆಟ್ಟಿಗೆಗಳನ್ನು ಕೂಡಾ ರಾಸಾಯನಿಕ ಸಿಂಪಡಣೆ ಮಾಡುತ್ತಿಲ್ಲ. ಇದರಿಂದಾಗಿ ಅಲ್ಲಿನ ಸಿಬ್ಬಂದಿಗಳಿಗೂ ಸೋಂಕಿನ ಅಪಾಯ ಹೆಚ್ಚಿದ್ದು, ಈಗಾಗಲೇ ಮೊದಲ ಮತ್ತು ಎರಡನೇ ಅಲೆಯಲ್ಲಿ ಬೆಂಗಳೂರಿನಲ್ಲಿ 16, ರಾಜ್ಯಾದ್ಯಂತ 90 ಅಂಚೆ ಸಿಬ್ಬಂದಿ ಸೋಂಕಿನಿAದ ಸಾವಿಗೀಡಾಗಿದ್ದಾರೆ.
 
*ಆರೋಗ್ಯಸೌಧದಲ್ಲಿಯೇ ಇಲ್ಲ ಮುಂಜಾಗ್ರತೆ :
ಆರೋಗ್ಯ ವ್ಯವಸ್ಥೆಯ ಮುಖ್ಯ ಕೇಂದ್ರ ಮಾಗಡಿ ರಸ್ತೆಯಲ್ಲಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಚೇರಿ `ಆರೋಗ್ಯ ಸೌಧ'ದಲ್ಲಿಯೂ ಥರ್ಮಲ್ ಸ್ಕಿöçÃನಿಂಗ್ ಆದೇಶ ಪ್ರತಿಗೆ ಮಾತ್ರ ಸೀಮಿತವಾಗಿದೆ. ಕಟ್ಟಡದಲ್ಲಿ ಕಾರ್ಯನಿರ್ವಹಿಸುವವರು ಬಹುತೇಕರು ವೈದ್ಯರು ಅಥವಾ ವೈದ್ಯಕೀಯ ಹಿನ್ನೆಲೆ, ಮಾಹಿತಿ ಹೊಂದಿರುತ್ತಾರೆ. ಇಷ್ಟಾದರೂ ಕೊರೊನಾ ಮುಂಜಾಗ್ರತಾ ಮಾತ್ರ ಪಾಲನೆಯಾಗುತ್ತಿಲ್ಲ.
 
*ಐಶಾರಾಮಿ ಹೋಟೆಲ್‌ಗಳಿಗೆ ಮಾತ್ರ ಸೀಮಿತ:
ಸ್ಯಾನಿಟೈಸರ್, ಥರ್ಮಲ್ ಸ್ಕಿöçÃನಿಂಗ್ ಕೇವಲ ಐಶಾರಾಮಿ ಹೋಟೆಲ್‌ಗಳಿಗೆ ಮಾತ್ರ ಸೀಮಿತವಾಗಿದೆ. ನಿಯಮಗಳ ಪ್ರಕಾರ ಹೋಟೆಲ್‌ಗಳಿಗೆ  ಬರುವ ಗ್ರಾಹಕರನ್ನು ಪ್ರವೇಶ ದ್ವಾರದಲ್ಲಿಯೇ ತಪಾಸಣೆ ನಡೆಸಿ, ಸ್ಯಾನಿಟೈಸರ್ ಹಾಕಿ ಆನಂತರ ಪ್ರವೇಶ ನೀಡಬೇಕು. ಆದರೆ, ನಗರದ ಶೇ.90 ರಷ್ಟು ಉಪಹಾರ ದರ್ಶಿನಿಗಳು, ರೆಸ್ಟೋರೆಂಟ್‌ಗಳು, ಕ್ಲಬ್‌ಗಳು, ಬಾರ್‌ಗಳಲ್ಲಿ ನಿಮಯ ಪಾಲನೆಯಾಗುತ್ತಿಲ್ಲ.
 
*ಖಾಸಗಿಯಲ್ಲಿ ಕಟ್ಟುನಿಟ್ಟಾಗಿ ಪಾಲನೆ:
ಖಾಸಗಿ ಸಂಸ್ಥೆಗಳು, ಐಟಿ ಪಾರ್ಕ್ಗಳು, ಬಹುಮಹಡಿ ಕಟ್ಟಡಗಳು, ಮಾಲ್‌ಗಳು, ಶಾಪಿಂಗ್ ಕಾಂಪ್ಲೆಕ್ಸ್ಗಳು, ಕೈಗಾರಿಕೆಗಳು, ಗಾರ್ಮೇಂಟ್ಸ್, ಖಾಸಗಿ ಆಸ್ಪತ್ರೆಗಳು ಮತ್ತು ಪ್ರಯೋಗಾಲಯಗಳಲ್ಲಿ ಮಾತ್ರ ಕಡ್ಡಾಯವಾಗಿ ಥರ್ಮಲ್ ಸ್ಕಾö್ಯನರ್ ಬಳಸಲಾಗುತ್ತಿದೆ. ಜತೆಗೆ ತಪಾಸಣೆ ಬಳಿಕ ಕೈಗೆ ಸ್ಯಾನಿಟೈಸರ್ ಹಾಕಿ ಆನಂತರವೇ ಒಳಗಡೆ ಪ್ರದೇಶ ನೀಡಲಾಗುತ್ತದೆ. ಒಂದು ವೇಳೆ ದೇಹದ ಉಷ್ಣಾಂಶದಲ್ಲಿ ವ್ಯತ್ಯಾಸ ಕಂಡು ಬಂದರೆ ಕೂಡಲೇ ವಿಚಾರಣೆ ನಡೆಸಲಾಗುತ್ತದೆ. ರೋಗ ಲಕ್ಷಣ ಇದ್ದರೆ ಹೆಚ್ಚುವರಿ ತಪಾಸಣೆಗೆ ಸಲಹೆ ನೀಡಿ ಪ್ರವೇಶವನ್ನು ನಿರಾಕರಿಸಲಾಗುತ್ತದೆ. ಅದರಲ್ಲೂ ಐಟಿ ಪಾರ್ಕ್ಗಳಲ್ಲಿ ಸ್ಥಳದಲ್ಲಿಯೇ ವೈದ್ಯಕೀಯ ತಪಾಸಣೆಗೆ ವ್ಯವಸ್ಥೆ ಮಾಡಲಾಗಿದೆ.
ಖಾಸಗಿ ವಲಯದ ಪೈಕಿ ಬಹುತೇಕರು  ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ದಂಡ ಹಾಕುತ್ತಾರೆ ಎಂಬ ಕಾರಣಕ್ಕೆ ನಿಯಮ ಪಾಲಿಸಿದರೆ, ಕೆಲವರು ಮಾತ್ರವೇ ತಮ್ಮ ಸಿಬ್ಬಂದಿಯ ಸುರಕ್ಷತೆಯ ಕಾರಣಕ್ಕೆ ಬಳಸುತ್ತಿದ್ದಾರೆ.
 
 
*ಬಿಬಿಎಂಪಿಯಲ್ಲಿ ಸೂಚನಾ ಫಲಕಕ್ಕಷ್ಟೇ ಸೀಮಿತ
ಬಿಬಿಎಂಪಿ ಕೇಂದ್ರ ಕಚೇರಿಯಲ್ಲೇ ಕೋವಿಡ್-19 ನಿಯಮಗಳು ಕೇವಲ ಸೂಚನಾ ಫಲಕಕ್ಕೆ ಸೀಮಿತವಾಗಿದೆ. ಅಧಿಕಾರಿಗಳು, ಕಚೇರಿ ಸಿಬ್ಬಂದಿ ಸೇರಿದಂತೆ ಸಾರ್ವಜನಿಕರಿಂದ ಕೋವಿಡ್ ನಿಯಮಗಳು ಪಾಲನೆಯಾಗುತ್ತಿಲ್ಲ. ಈ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತರು ಹಾಗೂ ವಿಶೇಷ ಆಯುಕ್ತ(ಆರೋಗ್ಯ)ರು ಗಮನಹರಿಸದೆ ಇರುವುದು ಚರ್ಚೆಗೆ ಗ್ರಾಸವಾಗುತ್ತಿದೆ.
ನಿತ್ಯ ಹಲವು ಕಾರ್ಯನಿಮಿತ್ತ ಪಾಲಿಕೆ ಕೇಂದ್ರ ಕಚೇರಿಗೆ ನೂರಾರು ಸಾರ್ವಜನಿಕರು ಬಂದು ಹೋಗುತ್ತಿದ್ದಾರೆ. ಆದರೆ, ಅರ‍್ಯಾರೂ ಸಾಮಾಜಿಕ ಅಂತರ(ವ್ಯಕ್ತಿಗತ ಅಂತರ) ಪಾಲನೆ ಮಾಡುತ್ತಿಲ್ಲ. ಪಾಲಿಕೆ ಮುಖ್ಯದ್ವಾರದಲ್ಲಿ ದೇಹದ ಉಷ್ಣಾಂಶ ತಪಾಸಣೆ ಮಾಡುತ್ತಿಲ್ಲ. ಕಚೇರಿಯ ಮುಖ್ಯ ಬಾಗಿಲು ಸೇರಿದಂತೆ ವಿಶೇಷ ಆಯುಕ್ತರ ಕಚೇರಿ ಬಾಗಿಲ ಬಳಿ ಸ್ಯಾನಿಟೈಸರ್ ಬಾಟಲ್ ಇಡಲಾಗಿದೆ. ಆದರೆ, ಸಾರ್ವಜನಿಕರು ಇದರ ಉಪಯೋಗವನ್ನೇ ಮಾಡುತ್ತಿಲ್ಲ. ಸಿಬ್ಬಂದಿ ಸಹ ಸ್ಯಾನಿಟೈಸರ್ ಬಳಸುವಂತೆ ಅರಿವು ಮೂಡಿಸುತ್ತಿಲ್ಲ. ಉಳಿದಂತೆ, ಪಾಲಿಕೆ ವ್ಯಾಪ್ತಿಯ ಎಂಟು ವಲಯಗಳ ಜಂಟಿ ಆಯುಕ್ತರ ಕಚೇರಿಯಲ್ಲೂ ಇದೇ ಪರಿಸ್ಥಿತಿ ಕಂಡುಬAದಿದೆ. ಕಚೇರಿಗಳಲ್ಲಿ ಅಧಿಕಾರಿಗಳು, ಸಿಬ್ಬಂದಿ ತೋರ್ಪಡಿಕೆಗಾಗಿ ಮಾಸ್ಕ್ ಧರಿಸುತ್ತಿದ್ದಾರೆ. ಕಚೇರಿಗೆ ಬರುವ ಸಾರ್ವಜನಿಕರು ಹಾಗೂ ಇನ್ನಿತರ ವ್ಯಕ್ತಿಗಳ ಸಂಭಾಷಣೆ ವೇಳೆ ಮಾಸ್ಕ್ ಧರಿಸುವುದು ವಿರಳವಾಗಿದೆ.
 
 
*ನಗರ ಜಿಲ್ಲಾ ಪಂಚಾಯ್ತಿಯಲ್ಲಿ ಪರೀಕ್ಷೆ ಮಾಡುವವರೆ ಇಲ್ಲ!
 ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಕಳೆದ ವರ್ಷ ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿಯ ಕಚೇರಿಯಲ್ಲಿ ತೀವ್ರ ತಪಾಸಣೆ ಕಾರ್ಯ ನಡೆಯಿತಿತ್ತು. ಕಚೇರಿಯ ಅಧಿಕಾರಿಗಳು ಸೇರಿದಂತೆ ಆಡಳಿತ ವರ್ಗದ ಎಲ್ಲಾ ಅಧಿಕಾರಿಗಳನ್ನು  ಪ್ರವೇಶ ದ್ವಾರದಲ್ಲಿ  ಥರ್ಮಲ್ ಸ್ಕಾö್ಯನರ್‌ಗೆ ಒಳಪಡಿಸಲಾಗುತ್ತಿತ್ತು. ಅದಕ್ಕಾಗಿಯೇ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಆದರೆ,  ಈಗ ಪ್ರವೇಶ ದ್ವಾರದಲ್ಲಿ ತಪಾಸಣಾ ಮಾಡುವ ಸಿಬ್ಬಂದಿಯೇ ಇಲ್ಲ. ಹೀಗಾಗಿ ಥರ್ಮಲ್ ಸ್ಕಾö್ಯನರ್ ತಪಾಸಣಾ ಕಾರ್ಯಕ್ಕೂ ಎಳ್ಳು ನೀರು ಬಿಡಲಾಗಿದೆ.
 ಕೋವಿಡ್ ನಡುವೆಯೂ ಸಾರ್ವಜನಿಕರು ತಮ್ಮ ಅನೇಕ ಕೆಲಸಗಳಿಗಾಗಿ ಜಿಲ್ಲಾ ಪಂಚಾಯ್ತಿ ಕಚೇರಿಗೆ ಭೇಟಿ ನೀಡುತ್ತಾರೆ. ವಿವಿಧ ಊರು ಮತ್ತು ಪ್ರದೇಶಗಳಿಂದ ಬಂದಿರುತ್ತಾರೆ. ಅವರನ್ನು ತಪಾಸಣೆ ಮಾಡಬೇಕಾಗಿದ್ದು ಜಿಲ್ಲಾಡಳಿತ ಕೈ ಕಟ್ಟಿ ಕುಳಿತುಕೊಂಡಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ. ಜಿಲ್ಲಾ ಪಂಚಾಯ್ತಿಯ ಪ್ರತಿ ಕಚೇರಿಗಳಲ್ಲಿ ತಪಾಸಣೆ ಮಾಯಾವಾಗಿದೆ.
 
*ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಂಜಾಗ್ರತೆ ಮಾಯ:
 ಕನ್ನಡ ಭವನದಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲೂ ಕೋವಿಡ್ ತಪಾಸಣೆ ಕಾರ್ಯ ಮಾಯವಾಗಿದೆ. ಜೆಸಿ ರಸ್ತೆಯಲ್ಲಿರುವ ಕನ್ನಡ ಭವನದಲ್ಲಿ ಕೋವಿಡ್ 2ನೇ ಅಲೆ ವರೆಗೂ ತಪಾಸಣೆ ಕಾರ್ಯ ಕಟ್ಟುನಿಟ್ಟಾಗಿತ್ತು.ಆದರೆ ಜನತಾ ಕರ್ಫ್ಯೂ ಸಡಿಲಿಕೆಯ ನಂತರ ಇದು ಮಾಯವಾಗಿದೆ.
ಕನ್ನಡ ಭವನಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ವ್ಯಾಪ್ತಿಗೆ ಬರುವ ಅಕಾಡೆಮಿ ಮತ್ತು ಪ್ರಾಧಿಕಾರ ಕಚೇರಿಗಳಿವೆ.ಆದರೆ ಯಾವ ಕಚೇರಿಯಲ್ಲೂ ಕೂಡ ಆರೋಗ್ಯ ತಪಾಸಣೆಯ ಬಗ್ಗೆ ಕಾಳಜಿ ಯಿಲ್ಲ. ಸ್ಯಾನಿಟೈಜರ್ ಕೂಡ ಪ್ರಾಧಿಕಾರಿಗಳ ಕಚೇರಿಯಲ್ಲಿ ಇಲ್ಲ.
 
*ಪೊಲೀಸ್ ಠಾಣೆಗಳಿಗೆ ಸ್ಕಾö್ಯನರ್ ಬಳಕೆಯೇ ಇಲ್ಲ
ನಗರ ಪೊಲೀಸ್ ಆಯುಕ್ತರ ಕಚೇರಿ ಹೊರತು ಪಡಿಸಿ ನಗರದ 130ಕ್ಕೂಹೆಚ್ಚು ಕಾನೂನು ಸುವ್ಯವಸ್ಥೆ ಮತ್ತು ಸಂಚಾರ ಠಾಣೆಗಳಲ್ಲಿ ಥರ್ಮಲ್ ಸ್ಕಾö್ಯನರ್ ಬಳಕೆ ಆಗುತ್ತಿಲ್ಲ. ಕೊರೊನಾ ಮೊದಲ ಮತ್ತು ಎರಡನೇ ಅಲೆ ಸಂದರ್ಭದಲ್ಲಿ ನೂರಾರು ಮಂದಿ ಅಧಿಕಾರಿ-ಸಿಬ್ಬಂದಿ ಮೃತಪಟ್ಟಿದ್ದರು. ಅಲ್ಲದೆ, ಠಾಣೆಯಲ್ಲಿ ಒಬ್ಬರಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ಬಳಿಕ ಇಡೀ ಠಾಣೆಯನ್ನೇ ಪಕ್ಕದ ಖಾಲಿ ಜಾಗಕ್ಕೆ ಸ್ಥಳಾಂತರಿ, ಸ್ಯಾನಿಟೈಸರ್ ಮಾಡಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ನಗರದ ಪ್ರತಿಯೊಂದು ಪೊಲೀಸ್ ಠಾಣೆಯಲ್ಲಿ ಥರ್ಮಲ್ ಸ್ಕಾö್ಯನರ್ ಮೂಲಕ ಠಾಣೆಗೆ ಬರುವ ಸಾರ್ವಜನಿಕರ ತಪಾಸಣೆ ನಡೆಸಲಾಗುತ್ತಿತ್ತು. ಆದರೆ. ಇದೀಗ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಹೊರತು ಪಡಿಸಿ ಬೇರೆ ಯಾವುದೇ ಪೊಲೀಸ್ ಠಾಣೆಗಳಲ್ಲಿ ಥರ್ಮಲ್ ಸ್ಕಾö್ಯನರ್ ಬಳಸುತ್ತಿಲ್ಲ. ಜತೆಗೆ ಸ್ಯಾನಿಟೈಸರ್ ಬಳಕೆ ಕೂಡ ಇಲ್ಲವಾಗಿದೆ.
ಮತ್ತೊಂದೆಡೆ ಕೇರಳ ಮತ್ತು ಮಹಾರಾಷ್ಟçದಲ್ಲಿ ಕೊರೊನಾ ಮೂರನೇ ಅಲೆ ಹೆಚ್ಚಾಗಿದ್ದು, ಅದರು ಬೆಂಗಳೂರಿನ ಮೇಲೆ ಭಾರೀ ಪರಿಣಾಮ ಬೀರಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಒಂದು ವೇಳೆ ಮೂರನೇ ಅಲೆ ಅಪ್ಪಳಿಸಿದರೆ ಪೊಲೀಸರೇ ಕೊರೊನಾ ವಾರಿಯರ್ಸ್ಗಳಾಗಿ ಕರ್ತವ್ಯ ನಿರ್ವಹಿಸಬೇಕಿದೆ. ಆದರೂ ಠಾಣೆಗಳಲ್ಲಿ ಥರ್ಮಲ್ ಸ್ಕಾö್ಯನರ್, ಸ್ಯಾನಿಟೈಸರ್ ಬಳಕೆ ಮಾಡದಿರುವುದು ವಿಷಾದಕರ ಸಂಗತಿ.  

Share this Story:

Follow Webdunia kannada

ಮುಂದಿನ ಸುದ್ದಿ

4 ಅಡಿ ಮೇಲೆ ಗಣೇಶ ಕೂರಿಸಬಾರದೆಂದು ನಿರ್ಬಂಧ ವಿಧಿಸಿದ ಬಿಬಿಎಂಪಿ