Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೂ ಮಳೆ ಧಾರವಾಹಿ ಸದ್ಯದಲ್ಲೇ ಪ್ರಸಾರ ಮುಕ್ತಾಯಗೊಳಿಸಲಿದೆ ಎನ್ನಲಾಗಿದೆ.
ಧಾರವಾಹಿ ಆರಂಭದಲ್ಲಿ ಇದ್ದ ರೇಟಿಂಗ್ ಪಾಯಿಂಟ್ ಈಗ ಬರುತ್ತಿಲ್ಲ. ಇದೇ ಕಾರಣಕ್ಕೆ ಧಾರವಾಹಿ ಶೀಘ್ರದಲ್ಲೇ ಮುಕ್ತಾಯ ಕಾಣುತ್ತಿದೆ ಎನ್ನಲಾಗಿದೆ. ಹಾಗಿದ್ದರೂ ಇದು ತಕ್ಕಮಟ್ಟಿಗೆ ಹೆಸರು ಮಾಡಿತ್ತು.
ಬಿಗ್ ಬಾಸ್ ಖ್ಯಾತಿ ಚಂದನಾ ನಾಯಕಿಯಾಗಿದ್ದ ಈ ಧಾರವಾಹಿ ಇದುವರೆಗೆ 220 ಸಂಚಿಕೆ ಪ್ರಸಾರವಾಗಿದೆಯಷ್ಟೇ. ಇನ್ನೀಗ ಕೊನೆಯ ಸಂಚಿಕೆಗಳನ್ನು ಪ್ರಸಾರ ಮಾಡಲಿದೆ. ಧಾರವಾಹಿ ಅಭಿಮಾನಿಗಳಿಗೆ ಇದು ನಿಜಕ್ಕೂ ಶಾಕಿಂಗ್ ಸುದ್ದಿಯಾಗಿದೆ.