Publish Date: Sun, 17 Sep 2023 (17:43 IST)
Updated Date: Sun, 17 Sep 2023 (16:51 IST)
ಬುಲೆರೋ ವಾಹನದಲ್ಲಿ ಕರುಗಳ ಸಾಗಾಟ ಮಾಡುತ್ತಿದ್ದ ವೇಳೆ ಅಪಘಾತವಾಗಿದ್ದು, ಖದೀಮರು ಪರಾರಿಯಾಗಿದ್ದಾರೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಂಜುಟಗಿ ಬಳಿ ಘಟನೆ ನಡೆದಿದೆ. ಕರುಗಳ ಕೈ ಕಾಲು ಕಟ್ಟಿ, ಬಾಯಿಗೆ ಟಿಕ್ಸೋ ಬಿಗಿದು ಸಾಗಾಟ ಮಾಡುತ್ತಿದ್ದ, 60ಕ್ಕೂ ಅಧಿಕ ಕರುಗಳನ್ನ ರೈತರು ರಕ್ಷಣೆ ಮಾಡಿದ್ದಾರೆ. ಬೊಲೆರೋ ಪಿಕಪ್ ವಾಹನ ಮಹಾರಾಷ್ಟ್ರದ ಸತಾರಾ ಕಡೆಯಿಂದ ವಿಜಯಪುರಕ್ಕೆ ಬರುತ್ತಿತ್ತು.ವಾಹನದಲ್ಲಿ ಮಾರಕಾಸ್ತ್ರಗಳು ಸಹ ಪತ್ತೆಯಾಗಿದ್ದು, ಕರುಗಳನ್ನ ಕತ್ತರಿಸಲು ಮಾರಕಾಸ್ತ್ರ ತಂದಿರುವ ಶಂಕೆ ವ್ಯಕ್ತವಾಗಿದೆ.