Publish Date: Mon, 28 Aug 2023 (19:40 IST)
Updated Date: Mon, 28 Aug 2023 (19:33 IST)
ಜೆಡಿಎಸ್-ಬಿಜೆಪಿ ಶಾಸಕರು ಕಾಂಗ್ರೆಸ್ ಸೇರೋ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಹಳ ಜನ ಬಿಜೆಪಿ, ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬರಲು ವಿವಿಧ ಹಂತಗಳಲ್ಲಿ ಚರ್ಚೆ ನಡೆಯುತ್ತಿದೆ. ಅವರನ್ನ ಗಮನದಲ್ಲಿಟ್ಟುಕೊಂಡು ಅಧ್ಯಕ್ಷರು ಕ್ರಮ ಕೈಗೊಳ್ಳುತ್ತಾರೆ. ನನ್ನನ್ನ ತುಮಕೂರಿನ ಯಾವ ಹಾಲಿ, ಮಾಜಿ ಶಾಸಕರು ಸಂಪರ್ಕಿಸಿಲ್ಲ. ಅಧ್ಯಕ್ಷರ ಜೊತೆ ಮಾತನಾಡಿದ್ದಾರೆ ಅಂದ್ರೆ ನನ್ನ ಜೊತೆ ಮಾತನಾಡಿದಂತೆ ಎಂದಿದ್ದಾರೆ.