ಮೆಟ್ರೋ ಪಿಲ್ಲರ್ ನಿಂದ ತಾಯಿ ಮಗು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ BMRCL ಇಂಜಿನಿಯರ್ ಗಳ ತಲೆದಂಡವಾಗುತ್ತಾ? ಎಂಬ ಪ್ರಶ್ನೆ ಉದ್ಭವವಾಗಿದೆ.
ಈ ವೇಳೆ ಮಾತನಾಡಿದ IISC expert ಚಂದ್ರ ಕಿಶನ್ ಇನ್ನು 4 ದಿನದಲ್ಲಿ IISC ಯಿಂದ ಪಿಲ್ಲರ್ ಕುರಿತು ರಿಸಲ್ಟ್ ಪ್ರಕಟವಾಗುತ್ತೆ ಅಂತಾ ಹೇಳಿದ್ದಾರೆ.ಅಲ್ಲದೆ ಈಗಾಗಲೇ ಶೇ 80.IISC ತಾಂತ್ರಿಕ ತನಿಖೆ ಮುಗಿಸಿದೆ.ಫಿಲ್ಲರ್ ಕುಸಿಯಲು ಮುಖ್ಯ ಕಾರಣ ಅತಿ ಎತ್ತರಕ್ಕೆ ಕಂಬಿ ಕಟ್ಟಿರುವುದೇ ಆಗಿರಬಹುದು.ಸ್ಪಾಟ್ ವಿಸಿಟ್ , ಇಂಜಿನಿಯರ್ಸ್ ಹೇಳಿಕೆ , ಮಣ್ಣು ,ಕಂಬಿ ಸಲಕರಣೆ ಪರೀಕ್ಷೆ ನಡೆದಿದೆ .ಕಾಮಗಾರಿಯಲ್ಲಿ ಗುಣಮಟ್ಟದ ವಸ್ತುಗಳ ಬಳಕೆ ಆಗಿದೆ .ಆದ್ರೆ 18 ಅಡಿ ಎತ್ತರ ಕಂಬಿ ಕಟ್ಟಿರೋದು ಅನಾಹುತಕ್ಕೆ ಕಾರಣವಾಗಿದೆ. ಸರಿಯಾದ ಸಪೋರ್ಟ್ ನೀಡಿಲ್ಲ .ಕಂಬಿ ಎತ್ತರ ಜಾಸ್ತಿ ಆಗಿ ಘಟನೆ ಸಂಭವಿಸಿದೆ ಎಂದು ಕಿಶಾನ್ ಹೇಳಿದ್ದಾರೆ.