ಕಾಂಗ್ರೆಸ್ ಪಕ್ಷದಲ್ಲಿ ಅವಕಾಶ ಸಿಗೋದಾದ್ರೆ ಆ ಪಕ್ಷ ಸೇರ್ತೀನಿ ಎಂದು ಮಾಜಿ ಸಂಸದ ಹಾಗೂ ಜೆಡಿಎಸ್ ಮುಖಂಡ ಆಯನೂರು ಮಂಜುನಾಥ್ ಹೇಳಿದ್ದಾರೆ.ಸದಾಶಿವನಗರದಲ್ಲಿ ಡಿಸಿಎಂ ಡಿಕೆಶಿವಕುಮಾರ್ ಭೇಟಿ ವಿಚಾರವಾಗಿ ಮಾತನಾಡಿದ ಅವರು ರಾಜಕೀಯ ಉದ್ದೇಶದಿಂದ ಭೇಟಿಮಾಡಿಲ್ಲ. ಬೇರೆ ಕೆಲಸ ಕಾರ್ಯದ ಸಂಬಂಧ ಭೇಟಿಮಾಡಿದ್ದೆ.ಕೆಲವು ಮನವಿ ಸಲ್ಲಿಸಿದೆ. ಸಹಜವಾಗಿ ರಾಜಕೀಯ ಚರ್ಚೆ ಆಗಿದೆ.ಶಿವಮೊಗ್ಗ ಜಿಲ್ಲೆಯ ರಾಜಕೀಯ ಚರ್ಚೆ ಆಗಿದೆ.ಕೆಲ ಕಾಂಗ್ರೆಸ್ ಸ್ನೇಹಿತರು ಕಾಂಗ್ರೆಸ್ ಸೇರ್ಪಡೆಗೆ ವಿರೋಧ ಮಾಡಿದ್ರು. ಅದರ ಬಗ್ಗೆ ಚರ್ಚೆ ಮಾಡಿದ್ದೇವೆ. ಈಗಾಗಲೇ ಕಾಂಗ್ರೆಸ್ಸಿನಿಂದ ಆಹ್ವಾನ ಬಂದಿದೆ. ಕೆಲ ವಿಚಾರ ಇನ್ನೂ ತೀರ್ಮಾನ ಆಗಬೇಕಿದೆ. ಅದೆಲ್ಲ ಖಚಿತವಾದ ಮೇಲೆ ಎಲ್ಲ ಮಾತನಾಡುತ್ತೇನೆ. ಏನು ಚರ್ಚೆ ಮಾಡಿದ್ದೇನೆ ಅಂತ ಈಗ ಹೇಳಲ್ಲ.ಅದೆಲ್ಲ ಖಚಿತವಾದ ಮೇಲೆ ಹೇಳುತ್ತೇನೆ ಎಂದು ಹೇಳಿದರು.
ಎನ್ ಪಿಎಸ್,ಓಪಿಎಸ್ ಬಗ್ಗೆ ಚರ್ಚೆ ಮಾಡಿದ್ದೇನೆ.ಅತಿಥಿ ಉಪನ್ಯಾಸಕರ ಬಗ್ಗೆ ಚರ್ಚೆ ಮಾಡಿದ್ದೇನೆ. ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಸೇರಬೇಕಿತ್ತು.ಕೊನೆ ಕ್ಷಣದಲ್ಲಿ ಸಂಪರ್ಕ ಆಗಲಿಲ್ಲ. ಈಗ ಬದಲಾದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಸೇರುತ್ತಿದ್ದೇನೆ.ಆದ್ರೆ ಸೇರ್ಪಡೆ ಅಂತಿಮಗೊಂಡಿಲ್ಲ.ಲೋಕಸಭಾ ಹಾಗೂ ಪರಿಷತ್ ಚುನಾವಣೆ ಇದ್ದಾವೆ. ವಿಧಾನ ಪರಿಷತ್ ಚುನಾವಣೆ ಟಿಕೆಟ್ ಆಕಾಂಕ್ಷಿ ಇದ್ದೇನೆ. ಆದ್ರೆ ಕಂಡಿಷನ್ ಹಾಕದೆ ಕಾಂಗ್ರೆಸ್ ಸೇರ್ಪಡೆಯಾಗುತ್ತೇನೆ.ಕೆಲ ದಿನಗಳಲ್ಲಿ ಸೇರ್ಪಡೆ ತೀರ್ಮಾನ ಮಾಡುತ್ತೇನೆ ಎಂದರು.
ಶಿವಮೊಗ್ಗ ಜಿಲ್ಲೆಯ ಅನ್ಯ ಪಕ್ಷದ ನಾಯಕರ ಸೇರ್ಪಡೆ ಬಗ್ಗೆ ಗೊತ್ತಿಲ್ಲ.ಕುಮಾರ್ ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಗೊತ್ತಿಲ್ಲ. ಶಿವಮೊಗ್ಗ ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚೆ ಆಗಿದೆ. ಬಿಜೆಪಿಯಿಂದ ಸೇರುವಂತೆ ನನಗೆ ಯಾವುದೇ ಆಹ್ವಾನ ಬಂದಿಲ್ಲ. ಮಾಧ್ಯಮದಲ್ಲಿ ಆಹ್ವಾನ ಕೊಡುವುದು ಬಿಟ್ಟು ನಾಯಕರ ಸಂಪರ್ಕ ಮಾಡಲಿ ಎಂದು ಹೇಳಿದರು.