Publish Date: Sat, 07 Aug 2021 (20:47 IST)
Updated Date: Sat, 07 Aug 2021 (20:52 IST)
ಕೊರೋನಾ ಕೇಸ್ ಹೆಚ್ಚಾದ್ರೆ ಲಾಕ್ಡೌನ್ ಆಗುವ ಅಪಾಯವಿದೆ ಎಂದು ಮಂಗಳೂರಲ್ಲಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ಮಾತನಾಡಿದ ಅವರು,
ಪಾಸಿಟಿವಿಟಿ ರೇಟ್ ಶೇಕಡಾ 3 ತಲುಪಿದ್ರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಮಾಡಲಾಗಿದೆ.
ಇದು ಹೆಚ್ಚಾದ್ರೆ ಲಾಕ್ ಡೌನ್ ಮಾಡುವ ಅಪಾಯವಿದೆ ಎಂದ ಅವರು, ಕೋವಿಡ್ ನಿಯಂತ್ರಣ ಮಾಡುವುದು ಆರೋಗ್ಯ ಇಲಾಖೆಯ ಜವಾಬ್ದಾರಿ. ಅದು ನಿಯಮಗಳನ್ನು ಪಾಲಿಸುವುದು ಕೂಡ ಸಾರ್ವಜನಿಕರ ಜವಾಬ್ದಾರಿಯಾಗಿದೆ ಎಂದರು.