ಅತ್ಯಂತ ವೇಗವಾಗಿ ಹರಡುವ ಕೊರೊನಾದ ರೂಪಾಂತರ ತಳಿ ಡೆಲ್ಟಾ ವೈರಸ್‌ನಿಂದ 135 ರಾಷ್ಟ್ರಗಳಿಗೆ ಹಬ್ಬಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಡಬ್ಲ್ಯೂಎಚ್ ಒ ಸಂಸ್ಥೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ 135 ದೇಶಗಳಲ್ಲಿ ಡೆಲ್ಟಾ ವೈರಸ್ ಹಬ್ಬಿದೆ, 81 ರಾಷ್ಟ್ರಗಳಲ್ಲಿ ಗಾಮಾ ರೂಪಾಂತರ ಕೊರೊನಾ ಹಬ್ಬಿದೆ. ಒಂದು ವಾರದಲ್ಲಿ ಸುಮಾರು 200 ದಶಲಕ್ಷ ಜನರಿಗೆ ಸೋಂಕಿಗೆ ಗುರಿಯಾಗುವಿಕೆ ಎಂದು ಹೇಳಲಾಗಿದೆ.
ಆಲ್ಫಾ ವೈರಸ್‌ನಿಂದ 182 ದೇಶಗಳಲ್ಲಿ ವ್ಯಾಪಿಸಿದೆ. ಭಾರತದಲ್ಲಿ ಮೊದಲ ಬಾರಿ ಪತ್ತೆಯಾದ ಡೆಲ್ಟಾ ವೈರಸ್ ಹಲವಾರು ದೇಶಗಳಿಗೆ ವ್ಯಾಪಕವಾಗಿ ಹರಡಿದೆ, ಇದು ಮತ್ತಷ್ಟು ವಿಸ್ತರಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.