ಬೆಂಗಳೂರು: 34 ಕೆಎಎಸ್ ಅಧಿಕಾರಿಗಳಿಗೆ ಐಎಎಸ್ ಪದೋನ್ನತಿಗೆ ಕೇಂದ್ರ ಲೋಕಸೇವಾ ಆಯೋಗ ಮಹತ್ವದ ತೀರ್ಮಾನ ತೆಗೆದುಕೊಂಡಿದೆ.
ಇಂದು ನಡೆದ ಸಭೆಯಲ್ಲಿ ಕೆಎಎಸ್ ಅಧಿಕಾರಿಗಳ ಪದೋನ್ನತಿಗೆ ಯುಪಿಎಸ್ಸಿ ಸಮ್ಮತಿ ಸೂಚಿಸಿದೆ. ಒಟ್ಟು 56 ಕೆಎಎಸ್ ಅಧಿಕಾರಿಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಯುಪಿಎಸ್ಸಿಗೆ ಸಲ್ಲಿಸಿತ್ತು. ಈ ಪೈಕಿ 34 ಕೆಎಎಸ್ ಅಧಿಕಾರಿಗಳಿಗೆ ಐಎಎಸ್ ಪದೋನ್ನತಿಗೆ ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿದೆ.
ಇನ್ನುಳಿದಂತೆ 15ಕ್ಕೂ ಹೆಚ್ಚು ಕೆಎಎಸ್ ಅಧಿಕಾರಿಗಳ ಪದೋನ್ನತಿಗೆ ಬ್ರೇಕ್ ಬಿದ್ದಿದೆ. ಈ ಕುರಿತು ಸರ್ಕಾರದಿಂದ ಯುಪಿಎಸ್ಸಿ ಸ್ಪಷ್ಟೀಕರಣ ಕೇಳಿದ್ದು, ಕೆಎಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿ ರಾಜ್ಯ ಸರ್ಕಾರದ ಆದೇಶ ಹೊರಡಿಸಿದೆ.