ಬೆಂಗಳೂರು: 12 ವರ್ಷದ ಬಳಿಕ ಅಣ್ಣ-ತಂಗಿ ಜೋಡಿ ಖ್ಯಾತಿಯ ಶಿವರಾಜ್ ಕುಮಾರ್ ಮತ್ತು ನಟಿ ರಾಧಿಕಾ ಕುಮಾರಸ್ವಾಮಿ ಮತ್ತೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ನಿರ್ದೇಶಕ ಸಾಯಿ ಪ್ರಕಾಶ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಈ ಹಿಂದೆ ಮೂವರ ಕಾಂಬಿನೇಷನ್ ನಲ್ಲಿ ತವರಿಗೆ ಬಾ ತಂಗಿ, ಅಣ್ಣ ತಂಗಿ ಚಿತ್ರ ಮೂಡಿ ಬಂದಿತ್ತು. ಇದೀಗ ಶಮಿಕಾ ನಬ್ಯಾನರ್ ಅಟಿಯಲ್ಲಿ ಮತ್ತೆ ಈ ಮೂವರು 12 ವರ್ಷದ ಬಳಿಕ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲೂ ಅಣ್ಣ ತಂಗಿ ಪಾತ್ರದಲ್ಲಿ ಶಿವಣ್ಣ-ರಾಧಿಕಾ ನಟಿಸುತ್ತಿದ್ದಾರೆ.
ಸದ್ಯ ರಾಧಿಕಾ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗಿನ ಟ್ರೆಂಡ್ ಗೆ ತಕ್ಕಂತೆ ಸಹೋದರ ಸಹೋದರಿಯ ಕಥೆ ಹೆಣೆಯುತ್ತಿದ್ದಾರಂತೆ ಸಾಯಿ ಪ್ರಕಾಶ್. ಸದ್ಯ ಶಿವರಾಜ್ ಕುಮಾರ್ ದಿ ವಿಲನ್ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ಅವರು ಬಂದ ಬಳಿಕ ಚರ್ಚಿಸಿ ಮುಂದಿನ ಚಿತ್ರದ ಬಗ್ಗೆ ಅಧಿಕೃತವಾಗಿ ಘೋಷಿಸುತ್ತಾರೆ ಎಂದು ತಿಳಿದು ಬಂದಿದೆ.