Publish Date: Wed, 21 Sep 2022 (10:32 IST)
Updated Date: Wed, 21 Sep 2022 (06:35 IST)
ಹಾಸನ : ವಿಧಾಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಸಾಕಷ್ಟು ಜನ ನನಗೆ ಒತ್ತಡ ಹೇರುತ್ತಿದ್ದಾರೆ. ಹಾಸನ ವಿಧಾನಸಭಾ ಕ್ಷೇತ್ರದಿಂದ ಯಾರಿಗೆ ಟಿಕೆಟ್ ಕೊಟ್ಟರೂ ನಾನು ಕೆಲಸ ಮಾಡುತ್ತೇನೆ.
ಜೆಡಿಎಸ್ ವರಿಷ್ಠರ ತೀರ್ಮಾನಕ್ಕೆ ನಾನು ಬದ್ಧ ಎಂದು ಭವಾನಿ ರೇವಣ್ಣ ಹೇಳಿದ್ದಾರೆ. ಹಾಸನದ ಎರಡನೇ ವಾರ್ಡ್ನ ಅಶೋಕ ಬಡಾವಣೆಯಲ್ಲಿ 12.40 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಪುತ್ರ ಹಾಗೂ ಸಂಸದ ಪ್ರಜ್ವಲ್ ಪರವಾಗಿ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು,
ಯಾರಿಗೆ ಟಿಕೆಟ್ ಕೊಟ್ಟರೂ ಭವಾನಿಯಾಗಿ, ರೇವಣ್ಣ ಅವರ ಪತ್ನಿಯಾಗಿ, ಪ್ರಜ್ವಲ್, ಸೂರಜ್ ಅವರ ತಾಯಿಯಾಗಿ ಕಾರ್ಯಕರ್ತರ ಜೊತೆ ಏನು ಕೆಲಸ ಮಾಡುತ್ತಿದ್ದೇನೋ, ಮುಂದೆಯೂ ಅದೇ ಕೆಲಸ ಮಾಡುತ್ತೇನೆ ಎಂದಿದ್ದಾರೆ.
ಸಾರ್ವಜನಿಕರು ನನ್ನನ್ನು ತಮ್ಮ ಮನೆ ಮಗಳು ಎನ್ನುವ ಭಾವನೆಯಲ್ಲಿ ಕಾರ್ಯಕ್ರಮಕ್ಕೆ ಕರೆದಾಗ ಬರುತ್ತಿದ್ದೇನೆ. ನನ್ನ ಮಕ್ಕಳು ಮಾತ್ರ ಅಲ್ಲ, ದೇವೇಗೌಡರ ರಾಜಕೀಯ ಜೀವನದಲ್ಲಿ ಹಾಸನದ ಜನರ ಜೊತೆ ನಿಂತಿದ್ದಾರೆ. ಅವರು ಕರೆದಾಗ ಬರದೆ ಇರಬಾರದು ಎನ್ನುವ ಕಾರಣಕ್ಕೆ ಬರುತ್ತಾ ಇದ್ದೇನೆ ಅಷ್ಟೇ. ಅದನ್ನು ಬಿಟ್ಟರೆ ಬೇರೆ ಯಾವುದೇ ಚರ್ಚೆ ಇಲ್ಲ ಎಂದರು.