ದೀಪಾವಳಿ ಹಿನ್ನೆಲೆ ರಾಜ್ಯ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಲಕ್ಷ್ಮೀ ಪೂಜೆ ನೆರವೇರಿಸಿದ್ದಾರೆ. ಈ ಪೂಜೆಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ ಕೂಡ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಹೆಚ್ಡಿ ದೇವೇಗೌಡ ಸುದ್ದಿಗೋಷ್ಟಿ ನಡೆಸಿದರು.ಪ್ರಧಾನಿ ಹೆಚ್.ಡಿ.ಡಿ 2023 ಕ್ಕೆ ಚುನಾವಣೆಗೆ ನಾನು ಆಕ್ಟೀವ್ ಆಗಿ ಕೆಲಸ ಮಾಡಬೇಕು ಅಂತ ತೀರ್ಮಾನ ಮಾಡಿದ್ದೇನೆ ಎಂದರು. ಅಲ್ಲದೆ ಪಕ್ಷದ ಉಳಿದ ನಾಯಕರಿಗೂ ಆಕ್ಟೀವ್ ಆಗಿ ಕೆಲಸ ಮಾಡಬೇಕು ಎಂದು ಆದೇಶಿಸಿದ್ದಾರಂತೆ. ಅಕ್ಟೋಬರ್ 8 ರಿಂದ ಎರಡನೇ ಹಂತದ ಕಾರ್ಯಗಾರ ನಡೆಯಲಿದ್ದು , ಅಲ್ಲಿಂದ ಕಾರ್ಯಕ್ರಮ ಹಾಗೆಯೇ ಮುಂದುವರೆಯಲಿದೆ ಎಂದರು. ಉಪ ಚುನಾವಣೆಯ ಫಲಿತಾಂಶವನ್ನ ಸ್ವೀಕಾರ ಮಾಡ್ತೀವಿ ಅಂದ ದೊಡ್ಡ ಗೌಡ್ರು, ಜನರ ತೀರ್ಮಾನದಂತೆ ಹೋಗ್ತೀವಿ ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಹಣದಿಂದ ಬಲಿಷ್ಟವಾಗಿವೆ. ಪಕ್ಷ ಕಟ್ಟೋದಕ್ಕೆ ಆರ್ಥಿಕ ಶಕ್ತಿ ಮುಖ್ಯವಾಗಿದ್ದು. ಪ್ರಾದೇಶಿಕ ಪಕ್ಷ ಕಟ್ಟುವುದಕ್ಕೆ ಎಲ್ಲ ನಾಯಕರು ಜವಾಬ್ದಾರಿಯನ್ನ ಹೊರಬೇಕು ಎಂದು ದೇವೇಗೌಡರು ತಿಳಿಸಿದರು..