Publish Date: Thu, 04 Nov 2021 (17:16 IST)
Updated Date: Thu, 04 Nov 2021 (17:19 IST)
ಅಪ್ಪು ಅಭಿಮಾನಿಗಳು ಯಾರೂ ಕೂಡ ದಯವಿಟ್ಟು ಆತ್ಮಹತ್ಯೆ ಮಾಡಿಕೊಳ್ಳಬೇಡಿ ಅಂತ ರಾಘವೇಂದ್ರರಾಜ್ ಕುಮಾರ್ ಮನವಿ ಮಾಡಿಕೊಂಡಿದ್ದಾರೆ. ಈಗಾಗಲೇ ನೋವಿನಲ್ಲಿದ್ದೀವಿ, ದಯವಿಟ್ಟು ಮತ್ತೆ ನೋವು ಕೊಡಬೇಡಿ. ನಿಮ್ಮ ಪಾದಕ್ಕೆ ನಮಸ್ಕಾರ ಮಾಡ್ತೇನೆ.ಯಾರು ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ರಾಘವೇಂದ್ರ ರಾಜ್ಕುಮಾರ್ ಅಭಿಮಾನಿಗಳಿಗೆ ಹೇಳಿದ್ದಾರೆ.ಅಭಿಮಾನಿಗಳ ಸಾವಿಗೆ ನನ್ನ ಪತಿ ಕಾರಣ ಆಗಬಾರದು ಅಂತಾ ಅಪ್ಪು ಪತ್ನಿ ಅಶ್ವಿನಿ ಅವರು ರಾಘವೇಂದ್ರ ರಾಜ್ ಕುಮಾರ್ ಬಳಿ ನೋವನ್ನು ಹೊರಹಾಕಿದ್ದಾರಂತೆ. ಈ ಕಾರಣಕ್ಕೆ ರಾಘವೇಂದ್ರ ರಾಜ್ ಕುಮಾರ್ ಅಭಿಮಾನಿಗಳಿಗೆ ಆತ್ಮಹತ್ಯೆ ಮಾಡಿಕೊಳ್ಳಬೇಡಿ ಅಂತ ಮನವಿ ಮಾಡಿಕೊಂಡಿದ್ದಾರೆ.