ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಜಿಲ್ಲೆಗೆ ಬರುವುದೇ ವಸೂಲಿಗಾಗಿ ಎಂದು ಸ್ವತಃ ಪಾಲಿಕೆಯ ಆಯುಕ್ತರೇ ನೀಡಿದ ಹೇಳಿಕೆಯ ಆಡಿಯೋ ಈಗ ವೈರಲ್ ಆಗಿದೆ. ಈ ವಿಚಾರದ ಕುರಿತು ಸ್ಪಷ್ಟನೆ ನೀಡಿದ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ದಾವಣಗೆರೆಯಲ್ಲಿ ಮಾತನಾಡಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದೆ ಹಾಗಾಗಿ ಇಂತಹ ಷಡ್ಯಂತ್ರಗಳು ನಡೆಯುತ್ತಿರುತ್ತವೆ. ಆ ಆಡಿಯೋಗೂ ನನಗೂ ಯಾವುದೇ ಸಂಬಂಧವಿಲ್ಲ. ಉದ್ದೇಶಪೂರ್ವಕವಾಗಿ ನನ್ನ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡಲಾಗಿದೆ. ಆ ಆಡಿಯೋ ಒಂದು ಷಡ್ಯಂತ್ರವಾಗಿದೆ. ಈ ಸಂಬಂಧ ತನಿಖೆಯಾಗಲಿ, ಹಿಂದುಳಿದ ವರ್ಗದ ಸಚಿವರನ್ನೇ ಗುರಿಯಾಗಿಸಿಕೊಂಡು ಷಡ್ಯಂತ್ರ ರೂಪಿಸಲಾಗುತ್ತಿದೆ. ಈ ಹಿಂದೆ ಈಶ್ವರಪ್ಪನವರ ಮೇಲೆ ಇಂತಹದೊಂದು ಆರೋಪ ಬಂದಿತ್ತು. ಅವರು ಈ ಪ್ರಕರಣದಲ್ಲಿ ಶುದ್ಧ ಹಸ್ತರಾಗಿ ಹೊರಬಂದಿದ್ದಾರೆ. ಈಗ ನನ್ನ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಇದರ ವಿರುದ್ಧ ಕಾನೂನು ತಜ್ಞರ ಸಲಹೆ ಪಡೆದು ಹೋರಾಟ ಮಾಡುತ್ತೇನೆ ಎಂದು ತಿಳಿಸಿದ್ರು.