Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮೊಹಮ್ಮದ್ ನಲಪಾಡ್ ವಿರುದ್ಧ ಕೇಳಿ ಬಂದಿರುವ ಹಲ್ಲೆ ಆರೋಪ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ನಲಪಾಡ್ ಹೇಳಿಕೆ ನೀಡಿದ್ದಾರೆ. ನನಗೂ ಈ ಗಲಾಟೆಗೂ ಯಾವುದೇ ಸಂಬಂಧ ಇಲ್ಲ ಬೇಕಾದರೆ ನನ್ನ ವಿರುದ್ಧ ತನಿಖೆ ಆಗಲಿ ಎಂದು ನಲಪಾಡ್ ಪ್ರತಿಕ್ರಿಯಿಸಿದರು.
ಮಧ್ಯಾಹ್ನ ಊಟ ಆಯೋಜನೆ ಮಾಡಿದ್ದು ನಾನು. ಸಂಜೆ ನನ್ನ ಮಿತ್ರರು ಪಾರ್ಟಿ ಮಾಡಿದ್ದರು. ಸಂಜೆ ಪಾರ್ಟಿಗೂ ನನಗೂ ಸಂಬಂಧ ಇಲ್ಲ. ನನಗೆ ಅಧ್ಯಕ್ಷ ಸ್ಥಾನ ತಪ್ಪಿಸಲು ನಮ್ಮ ಪಕ್ಷದವರೇ ಹೀಗೆ ಮಾಡುತ್ತಿದ್ದಾರೆ. ನನ್ನ ವಿರುದ್ಧ ಯಾರೂ ಬೇಕಾದರೂ ತನಿಖೆ ಮಾಡಲಿ. ನನಗೆ ಫೆಬ್ರವರಿ 1ರಿಂದ ಕಾಂಗ್ರೆಸ್ ಯುವಮೋರ್ಚಾ ಅಧ್ಯಕ್ಷನಾಗಿ ಪಾದಾರ್ಪಾಣೆ ಮಾಡಲು ಈಗಾಗಲೇ ಆದೇಶ ನೀಡಲಾಗಿದೆ. ಇದು ನನ್ನ ಕೈ ತಪ್ಪಲಿದೆ ಎನ್ನುವುದನ್ನು ಬಿಟ್ಟು ಬಿಡಿ ಎಂದು ಹೇಳಿದ್ದಾರೆ.