Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಪಾರ್ಲ್: ವಿರಾಟ್ ಕೊಹ್ಲಿ ಮೈದಾನದಲ್ಲಿ ಆಕ್ರಮಣಕಾರಿ ವರ್ತನೆಯಿಂದಲೇ ಸುದ್ದಿಯಲ್ಲಿರುತ್ತಾರೆ. ಇದೀಗ ನಾಯಕತ್ವ ಬಿಟ್ಟ ಮೇಲೂ ಅವರ ಈ ವರ್ತನೆಯೇನೂ ಕಡಿಮೆಯಾಗಿಲ್ಲ.
ನಿನ್ನೆ ದ.ಆಫ್ರಿಕಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಆಫ್ರಿಕಾದ ಬವುಮಾ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ.
ಬವುಮಾ ಹೊಡೆದ ಚೆಂಡನ್ನು ಹಿಡಿದ ಕೊಹ್ಲಿ ನೇರವಾಗಿ ಸ್ಟಂಪ್ ನತ್ತ ಜೋರಾಗಿ ಎಸೆಯುತ್ತಾರೆ. ಈ ವೇಳೆ ಬವುಮಾ ರನ್ ಗಳಿಸಲು ಓಡಿರಲಿಲ್ಲ. ಹೀಗಾಗಿ ಬವುಮಾ ಅಂಪಾಯರ್ ಕಡೆಗೆ ಸನ್ನೆ ಮಾಡಿ ಕೊಹ್ಲಿ ವರ್ತನೆಯನ್ನು ಪ್ರಶ್ನಿಸಿದರು. ಇದು ಕೊಹ್ಲಿಯನ್ನು ಕೆರಳಿಸಿದೆ. ನೀನು ಕ್ರೀಸ್ ನಿಂದ ಮುಂದೆ ಇದ್ದೆ. ಅದಕ್ಕಾಗಿ ನಾನು ಚೆಂಡು ಎಸೆದೆ. ನಾನೀಗ ನಾಯಕನಲ್ಲ. ಪಂದ್ಯ ಮುಗಿದ ಮೇಲೆ ಯಾರಿಗೂ ಉತ್ತರ ಹೇಳಬೇಕಾಗಿಲ್ಲ. ಹಾಗಾಗಿ ನೀನು ನಿನ್ನ ಮಿತಿಯಲ್ಲಿರು ಎಂದು ಬವುಮಾಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಈ ಮಾತುಕತೆ ಸ್ಪಂಪ್ ಮೈಕ್ರೋಫೋನ್ ನಲ್ಲಿ ದಾಖಲಾಗಿದ್ದು, ವೈರಲ್ ಆಗಿದೆ.