Publish Date: Mon, 03 Jul 2023 (21:15 IST)
Updated Date: Mon, 03 Jul 2023 (20:21 IST)
ಕಾಂಗ್ರೆಸ್ಗೆ ಸೇರುತ್ತಾರೆ ಎಂಬ ವದಂತಿ ಬಗ್ಗೆ ಮಾಜಿ ಸಚಿವ ಮಾಧುಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.. ತುಮಕೂರಿನಲ್ಲಿ ಮಾತನಾಡಿದ ಅವರು, ನಾನು ಕಾಂಗ್ರೆಸ್ಗೆ ಹೋಗ್ತಿನಿ ಅಂತಾ ಯಾವನೋ ಮಠ್ಠಾಳ ಟಿ.ವಿಗೆ ಹಾಕಿಸ್ತಾನೆ. ನಾನೇ ಕಾಂಗ್ರೆಸ್ ಸಿದ್ದಾಂತ ವಿರೋಧ ಮಾಡಿ ಆ ಪಕ್ಷಕ್ಕೆ ಸೇರ್ತಿನಾ? ಎಂದು ಕಿಡಿಕಾರಿದ್ದಾರೆ.. ಇಡೀ ಜೀವಮಾನದಲ್ಲಿ ಕಾಂಗ್ರೆಸ್ ವಿರೋಧ ಮಾಡಿಕೊಂಡು ಬಂದೋನು ನಾನು, ನನಗೇನ್ರಿ ಬಂದಿದೆ ಅಂತಹ ದುಃಸ್ಥಿತಿ ಕಾಂಗ್ರೆಸ್ಗೆ ಹೋಗೋದು ಎಂದಿದ್ದಾರೆ.. ಜೆ.ಪಿ.ಮೂಮೆಂಟಲ್ಲಿ ಹೋರಾಟ ಮಾಡಿದವರು ನಾವು ನಾನು ಕಾಂಗ್ರೆಸ್ಗೆ ಹೋಗ್ತಿನಾ.? ನಾನು ಕಾಂಗ್ರೆಸ್ಗೆ ಹೋಗ್ತಿನಿ ಅಂತಾ ನಮ್ಮ ಕಾರ್ಯಕರ್ತರು ತಲೆ ಕೆಡಿಸಿಕೊಂಡಿದ್ರು ಎಂದ್ರು.