Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೋತಿಗಳ ಮೇಲೆ ಕೊರೋನಾ ಲಸಿಕೆ ಪ್ರಯೋಗಿಸಲಿರುವ ಪುಣೆಯ ಪ್ರಯೋಗಾಲಯ

ಕೋತಿಗಳ ಮೇಲೆ ಕೊರೋನಾ ಲಸಿಕೆ ಪ್ರಯೋಗಿಸಲಿರುವ ಪುಣೆಯ ಪ್ರಯೋಗಾಲಯ
ನವದೆಹಲಿ , ಗುರುವಾರ, 4 ಜೂನ್ 2020 (11:45 IST)
ನವದೆಹಲಿ: ಕೊರೋನಾಗೆ ಲಸಿಕೆ ಕಂಡುಕೊಳ್ಳಲು ವಿಶ್ವದ ಎಲ್ಲಾ ರಾಷ್ಟ್ರಗಳೂ ಪೈಪೋಟಿಗೆ ಬಿದ್ದಿವೆ. ಇದರಲ್ಲಿ ಭಾರತವೂ ಹಿಂದೆ ಬಿದ್ದಿಲ್ಲ. ಪುಣೆಯಲ್ಲಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಪ್ರಾಯೋಗಿಕವಾಗಿ ಲಸಿಕೆಯನ್ನು ತಯಾರಿಸಿದ್ದು 30 ಕೋತಿಗಳ ಮೇಲೆ ಪ್ರಯೋಗಿಸಲಿದೆ.


3 ರಿಂದ 4 ರ ವಯೋಮಾನದ 30 ಕೋತಿಗಳ ಮೇಲೆ ಲಸಿಕೆ ಪ್ರಯೋಗಿಸಲಾಗುವುದು. ಪುಣೆಯ ವಡಗಾಂವ್ ಅರಣ್ಯ ಪ್ರದೇಶದಲ್ಲಿನ ಕೋತಿಗಳನ್ನು ಇದಕ್ಕೆ ಬಳಸಲಾಗುತ್ತದೆ.

ದೇಶದಲ್ಲಿ ಈಗಾಗಲೇ ಸುಮಾರು 10 ಕ್ಕೂ ಹೆಚ್ಚು ಲಸಿಕೆ ಪ್ರಯೋಗ ಹಂತದಲ್ಲಿದೆ. ಸದ್ಯದಲ್ಲೇ ಇವುಗಳನ್ನು ಪ್ರಾಯೋಗಿಕವಾಗಿ ಪರೀಕ್ಷೆ ನಡೆಸಲಾಗುವುದು.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಾಣಾಯಾಮ ಮಾಡುವುದರ ಮುಖ್ಯ ಉಪಯೋಗಗಳು ಏನು ಗೊತ್ತಾ?