Publish Date: Mon, 10 Apr 2023 (14:20 IST)
Updated Date: Mon, 10 Apr 2023 (14:48 IST)
ಕಮಲ ಕಲಿಗಳು ಪಟ್ಟಿ ಬಿಡುಗಡೆಗೆ ಸರ್ಕಸ್ ಮಾಡ್ತಿದ್ದು, ಸಭೆ ಮೇಲೆ ಸಭೆ ನಡೆಸುತ್ತಿದ್ದಾರೆ.. ದೆಹಲಿಯಲ್ಲಿ ಮ್ಯಾರಥಾನ್ ಸಭೆ ನಡೆಸಿದ್ರೂ BJP ಪಟ್ಟಿ ಫೈನಲ್ ಆಗಿಲ್ಲ. ಕೆಲ ಕ್ಷೇತ್ರಗಳ ಟಿಕೆಟ್ ವಿಚಾರದಲ್ಲಿ ಗೊಂದಲ ಮುಂದುವರೆದಿದೆ.. ಕೇಸರಿ ಕದನ ಕಲಿಗಳ ಆಯ್ಕೆಗೆ ಮತ್ತೊಂದು ಸುತ್ತಿನ ಸಭೆ ನಡೆಸಲಾಗ್ತಿದೆ.. ಫಸ್ಟ್ ಲಿಸ್ಟ್ ಅಂತಿಮಗೊಳಿಸಲು ಬಿಜೆಪಿ ನಾಯಕರು ಸರ್ಕಸ್ ಮಾಡ್ತಿದ್ದು, BJPಗರ ನಡೆ ತೀವ್ರ ಕುತೂಹಲ ಮೂಡಿಸಿದೆ. ಇನ್ನು ಅಳೆದು ತೂಗಿ 150 ರಿಂದ 170 ಅಭ್ಯರ್ಥಿಗಳ ಲಿಸ್ಟ್ ಫೈನಲ್ ಆಗುವ ಸಾಧ್ಯತೆ ಇದೆ.. ಟಿಕೆಟ್ ಆಕಾಂಕ್ಷಿಗಳ ಎದೆಯಲ್ಲಿ ಢವಢವ ಶುರುವಾಗಿದೆ