Publish Date: Mon, 27 Dec 2021 (09:02 IST)
Updated Date: Mon, 27 Dec 2021 (09:04 IST)
ಬೆಂಗಳೂರು: ಸಾಮಾನ್ಯವಾಗಿ ಗಂಡನ ಮನೆಯವರು ಮನೆಗೆ ಬಂದ ಸೊಸೆಗೆ ಕಾಟ ಕೊಡುವುದು ಕೇಳಿದ್ದೇವೆ. ಆದರೆ ಗಂಡಂದಿರೂ ಈ ರೀತಿ ಮಾನಸಿಕ, ದೈಹಿಕ ಹಿಂಸೆ ಅನುಭವಿಸುತ್ತಾರೆ.
ಇದೀಗ ಬೆಂಗಳೂರಿನ ನಿವಾಸಿಯೊಬ್ಬರು ತನ್ನ ಪತ್ನಿ ನನಗೆ ಹೊಡೆದು, ಬಡಿದು ಹಿಂಸೆ ನೀಡುತ್ತಾಳೆಂದು ಪೊಲೀಸರಿಗೆ ದೂರು ನೀಡಿದ್ದಾರೆ. ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಪತಿ ನನ್ನನ್ನು ಪತ್ನಿ ಗುಲಾಮಳಂತೆ ನಡೆಸಿಕೊಳ್ಳುತ್ತಾಳೆ ಎಂದು ದೂರಿದ್ದಾರೆ.
2020 ರಲ್ಲಿ ದಂಪತಿ ಮದುವೆಯಾಗಿದ್ದರು. ಆದರೆ ಮದುವೆಯಾದ ಮೇಲೆ ಹೆಂಡತಿ ನನ್ನನ್ನು ಹಿಂಸಿಸುತ್ತಿದ್ದಾಳೆ. ಕಾರು, ಬೆಲೆ ಬಾಳುವ ವಸ್ತುಗಳನ್ನೆಲ್ಲಾ ಖರೀದಿಸಿ ಕೊಟ್ಟರೂ ನನ್ನನ್ನು ಕೀಳಾಗಿ ನಡೆಸಿಕೊಳ್ಳುತ್ತಾಳೆ ಎಂದು ಪತಿ ದೂರಿದ್ದಾನೆ. ಇನ್ನೊಂದೆಡೆ ಪತ್ನಿ ಪತಿ ವಿರುದ್ಧ ವರದಕ್ಷಿಣೆ ಆರೋಪ ಹೊರಿಸಿ ದೂರು ನೀಡಿದ್ದಾಳೆ. ಇದಾದ ಬಳಿಕ ಪತಿಯೂ ಪತ್ನಿಯಿಂದ ದೈಹಿಕ, ಮಾನಸಿಕ ಹಿಂಸೆಯಾಗುತ್ತಿದೆ ಎಂದು ದೂರು ನೀಡಿದ್ದಾನೆ.