Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಉತ್ತರಾಖಂಡ: 18 ವರ್ಷದ ಯುವತಿ ತನ್ನನ್ನು ಅಂಕಲ್ ಎಂದು ಕರೆದಿದ್ದಕ್ಕೆ ಸಿಟ್ಟಿಗೆದ್ದ 35 ವರ್ಷದ ವ್ಯಕ್ತಿ ಆಕೆಯ ಮೇಲೆ ಹಲ್ಲೆ ನಡೆಸಿದ ಘಟನೆ ಉತ್ತರಾಖಂಡ್ ನಲ್ಲಿ ನಡೆದಿದೆ.
ಆರೋಪಿ ಕ್ರೀಡಾ ಪರಿಕರಗಳ ಅಂಗಡಿ ಇಟ್ಟುಕೊಂಡಿದ್ದ. ಆತನ ಅಂಗಡಿಯಿಂದ ಬ್ಯಾಡ್ಮಿಂಟನ್ ಬ್ಯಾಟ್ ಖರೀದಿಸಿದ್ದ ಯುವತಿ ಅದರಲ್ಲಿ ದೋಷವಿದೆ ಎಂದು ಮರಳಿಸಲು ಅಂಗಡಿಗೆ ಬಂದಿದ್ದಳು. ಈ ವೇಳೆ ಆಕೆ ಅಂಗಡಿ ಮಾಲಿಕನನ್ನು ಅಂಕಲ್ ಎಂದು ಕರೆದಿದ್ದು ಆತನಿಗೆ ಇಷ್ಟವಾಗಿರಲಿಲ್ಲ.
ಇದೇ ಕಾರಣಕ್ಕೆ ಮನಬಂದಂತೆ ಥಳಿಸಿದ್ದಾನೆ. ಪರಿಣಾಮ, ಯುವತಿಯ ತಲೆಗೆ ತೀವ್ರ ಪೆಟ್ಟಾಗಿದೆ. ಇದೀಗ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ.