Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ಆನ್ ಲೈನ್ ವೈವಾಹಿಕ ಅಂಕಣ ಮೂಲಕ ಪರಿಚಯವಾದ ವರನನ್ನು ಮದುವೆಯಾದ ಯುವತಿಯೊಬ್ಬಳು ಈಗ ವಂಚನೆಗೊಳಗಾಗಿ ಪೊಲೀಸರ ಮೊರೆ ಹೋಗಿದ್ದಾಳೆ.
ಬೆಂಗಳೂರಿನ ರಿಹಾನಾ ಶಾದಿ ಡಾಟ್ ಕಾಮ್ ಮೂಲಕ ಪರಿಚಯವಾಗಿದ್ದ ತಹ್ಸೀನ್ ಅಹಮ್ಮದ್ ಎಂಬಾತನನ್ನು ಮದುವೆಯಾಗಿದ್ದಳು. ಮದುವೆಯಾದ ಮೇಲೂ ಪತ್ನಿ ಮನೆಯಲ್ಲಿಯೇ ಇದ್ದ. ಒಂದು ತಿಂಗಳ ಬಳಿಕ ಬಿಸಿನೆಸ್ ಮಾಡಲು ಹಣಬೇಕೆಂದು ಪೀಡಿಸಲಾರಂಭಿಸಿದ. ಕೊನೆಗೆ ರಿಹಾನ ತನ್ನ ಬಳಿಯಿದ್ದ 2 ಲಕ್ಷ ರೂ. ಹಣ, ಚಿನ್ನಾಭರಣ ನೀಡಿದ್ದಳು.
ಇದನ್ನು ಪಡೆದುಕೊಂಡು ಗಂಡ ಎನಿಸಿಕೊಂಡವನು ಮನೆಯಿಂದ ಹೋದವನು ಇದುವರೆಗೆ ಪತ್ತೆಯಾಗಿಲ್ಲ ಎಂದು ರಿಹಾನ ಈಗ ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾಳೆ. ವಿಚಾರಣೆ ವೇಳೆ ಆರೋಪಿ ಇದೇ ರೀತಿ ಐದಾರು ಬಾರಿ ಮದುವೆಯಾಗಿ ಬೇರೆಯವರಿಗೂ ವಂಚಿಸಿರುವುದು ಪತ್ತೆಯಾಗಿದೆ.