Publish Date: Tue, 01 Feb 2022 (16:04 IST)
Updated Date: Tue, 01 Feb 2022 (16:25 IST)
ಮಕ್ಕಳ ಕೂಟ ಬಳಿ ಬಿಎಂಟಿಸಿ ಬಸ್ ಗೆ ಬೆಂಕಿ ತಗುಲಿತ್ತು. ಇದೀಗ ಬೆಂಗಳೂರಿನ ಜಯನಗರ ಸೌತ್ ಎಂಡ್ ಸರ್ಕಲ್ ಬಳಿ ಅಂತಹುದೆ ಮತ್ತೊಂದು ಘಟನೆ ನಡೆದಿದ್ದು, ರಾಜಧಾನಿಯಲ್ಲಿ ಹಾಡಹಾಗಲೇ ಮತ್ತೆ ಬಿಎಂಟಿಸಿ ಬಸ್ ಹೊತ್ತಿ ಉರಿದಿದೆ.
ಚಾಮರಾಜಪೇಟೆಯ ಮಕ್ಕಳ ಕೂಟ ಬಸ್ ನಿಲ್ದಾಣ ಬಳಿ ಬಿಎಂಟಿಸಿಸ್ ಬಸ್ನಲ್ಲಿ ಅಗ್ನಿ ಕಾಣಿಸಿಕೊಂಡಿತ್ತು. ಇದೀಗ ಅದೇ ರೀತಿ ಮತ್ತೊಂದು ಬಸ್ಗೆ ಬೆಂಕಿ ಹೊತ್ತಿ ಕೊಂಡಿದೆ. ಜಯನಗರದ ಸೌತ್ ಎಂಡ್ ಸರ್ಕಲ್ ಬಳಿ ಸುಮಾರು 30 ಪ್ರಯಾಣಿಕರಿದ್ದ,
ಬಸ್ ಹೋಗುವಾಗ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ ಜ್ವಾಲೆ ಹೆಚ್ಚಾಗುತ್ತಿದ್ದಂತೆ ಚಾಲಕ ಎಲ್ಲ ಪ್ರಯಾಣಿಕರನ್ನು ಇಳಿಸಿದ್ದಾರೆ. ಕೆಲ ಕ್ಷಣಗಳ ಬಳಿಕ ಬಸ್ ಸಂಪೂರ್ಣ ಹಾನಿಯಾಗಿದೆ.ಕೂಡಲೇ ಅಗ್ನಿಶಾಮಕದಳಕ್ಕೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ತಾಂತ್ರಿಕ ಕಾರಣಗಳಿಂದ ಘಟನೆ ನಡೆದಿದೆ ಎನ್ನಲಾಗಿದ್ದು, ಸ್ಥಳಕ್ಕೆ ಬಿಎಂಟಿಸಿಯ ತಾಂತ್ರಿಕ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಬೇಕಿದೆ.
geetha
Publish Date: Tue, 01 Feb 2022 (16:04 IST)
Updated Date: Tue, 01 Feb 2022 (16:25 IST)