Publish Date: Sun, 24 May 2020 (18:06 IST)
Updated Date: Sun, 24 May 2020 (18:07 IST)
ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ರಾಜ್ಯ ಸರ್ಕಾರದ ಆದೇಶದಂತೆ ಭಾನುವಾರದ ಲಾಕ್ ಡೌನ್ ಗೆ ಈ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ದೊರೆತಿದೆ.
ಕೊಪ್ಪಳ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಕೊಪ್ಪಳ ಜಿಲ್ಲಾ ಕೇಂದ್ರ ಸೇರಿದಂತೆ 7 ತಾಲೂಕಾ ಕೇಂದ್ರಗಳಾದ ಯಲಬುರ್ಗಾ, ಕುಕನೂರು, ಕುಷ್ಟಗಿ, ಕನಕಗಿರಿ, ಕಾರಟಗಿ, ಗಂಗಾವತಿ ಮತ್ತು ಕೊಪ್ಪಳ ಜಿಲ್ಲಾ ಕೇಂದ್ರಗಳಲ್ಲಿ ಯಾವುದೇ ತರನಾದ ಜನರ ಓಡಾಟ ಇಲ್ಲದೆ ರಸ್ತೆಗಳು ಭಣಗುಡುತ್ತಿದ್ದವು.
ಕೊಪ್ಪಳ ನಗರದ ಹೃದಯ ಭಾಗವಾದ ಅಶೋಕ ವೃತ್ತ, ಕೇಂದ್ರಿಯ ಬಸ್ ನಿಲ್ದಾಣ, ಜವಾಹರ ರಸ್ತೆ, ಕ್ಲಾಕ್ ಟವರ್ ವೃತ್ತ, ಗಂಜ್ ವೃತ್ತ ಸೇರಿದಂತೆ ಅನೇಕ ಕಡೆ ಜನರ ಒಡಾಟ ಇಲ್ಲದಿರುವುದು ಕಂಡು ಬಂತು. ಕೆಲವು ವಾಹನ ಚಾಲಕರು ರಸ್ತೆಗೆ ಬಂದಿರುವುದಕ್ಕೆ ಪೊಲೀಸರು ವಾರ್ನ್ ಮಾಡಿ ಮನೆ ಕಳಿಸಿದ್ದು ಬಿಟ್ಟರೆ ಕೊಪ್ಪಳ ಜಿಲ್ಲೆಯಲ್ಲಿ ಭಾನುವಾರದ ಲಾಕ್ ಡೌನ್ ಯಶಸ್ವಿಯಾಗಿದೆ.