ಕೃತಜ್ಞತೆ ಇಲ್ಲದವರು ನಾಯಕರಲ್ಲ– ಸಿಎಂ ವಿರುದ್ಧ ಎಚ್.ವಿಶ್ವನಾಥ್ ಕಿಡಿ

Webdunia
ಗುರುವಾರ, 22 ಫೆಬ್ರವರಿ 2018 (18:52 IST)
ಕೃತಜ್ಞತೆ ಗುಣ ಹೊಂದಿರದವರ ಜೀವನ ಜೀವನವೇ ಅಲ್ಲ, ಅಂಥವರು ನಾಯಕರೂ ಅಲ್ಲ ಎಂದು ಜೆಡಿಎಸ್ ಮುಖಂಡ ಎಚ್.ವಿಶ್ವಾನಾಥ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದ್ದಾರೆ.
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಕೀಯವಾಗಿ ಬೆಳೆಸಿದ ವ್ಯಕ್ತಿಗಳನ್ನು ದೂರುತ್ತಿರುವವರ ಮನೋಭಾವನೆಗೆ ಸದ್ಯದಲ್ಲೆ ಪ್ರತ್ಯುತ್ತರ ದೊರೆಯಲಿದೆ ಎಂದಿದ್ದಾರೆ.

ಸಿದ್ದರಾಮಯ್ಯರನ್ನು ರಾಜಕೀಯವಾಗಿ ಬೆಳೆಸಿದವರು ದೇವೇಗೌಡ ಅವರೇ ಹೊರತು ರಾಮಕೃಷ್ಣ ಹೆಗಡೆ ಅಲ್ಲ. ಆದರೆ, ದೇವೇಗೌಡರ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ. ಇದರಿಂದ ನೀವು ಜನನಾಯಕರಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ತಿಳಿಸಿದ್ದಾರೆ.

ಅಹಿಂದ ವರ್ಗದ ಹೆಸರೇಳಿ ಅಧಿಕಾರಕ್ಕೆ ಬಂದ ನೀವು ಆ ವರ್ಗದ ಆರ್ಥಿಕ ಬಲವರ್ಧನೆಗೆ ಯಾವುದೇ ಯೋಜನೆ ರೂಪಿಸಿಲ್ಲ. ನಿಮ್ಮ ಮೇಲೆ ಇಟ್ಟಿರುವ ನಂಬಿಕೆ ಹುಸಿಯಾಗಿದೆ. ಅಹಿಂದ ನಾಯಕನೆಂಬ ಪಟ್ಟವನ್ನು ನೀವೇ ಕಟ್ಟಿಕೊಂಡಿದ್ದೀರಿ. ಆದ್ದರಿಂದ ಮುಂದಿನ ದಿನಗಳಲ್ಲಿ ಅಹಿಂದ ವರ್ಗದವರೇ ತಕ್ಕ ಪಾಠ ಕಲಿಸುತ್ತಾರೆ ಎಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಚಿವ ಈಶ್ವರ್ ಖಂಡ್ರೆ ಆತ್ಮಕ್ಕೆ ಚಿರಶಾಂತಿ ಕೋರಿದ ಸಿಎಂ ಸಿದ್ದರಾಮಯ್ಯ, ಮುಂದೇನಾಯ್ತು ನೋಡಿ

ಆರ್‌ಎಸ್‌ಎಸ್‌ ದೆವ್ವವಿದ್ದಂತೆ ಎಂದ ಪ್ರಿಯಾಂಕ್ ಖರ್ಗೆ ಪರ ಬ್ಯಾಟ್ ಬೀಸಿದ ಶಿವರಾಜ ತಂಗಡಗಿ

ಮುಸ್ಲಿಂರನ್ನು ಗುರಿಯಾಗಿಸಿ ಗುಂಡು ಹಾರಿಸುತ್ತಿರುವ ಘಟನೆ, ಅಸ್ಸಾಂ ಸಿಎಂ ವಿರುದ್ಧ ಮಹತ್ವದ ತೀರ್ಪು

ತ್ರಿಷಾ ಗುಂಗಿನಿಂದ ವಿಜಯ್ ಆಚೆ ಬರಬೇಕೆಂದ ಬಿಜೆಪಿ ನಾಯಕ ನೈನಾರ್ ವಿರುದ್ಧ ನಟಿ ಗರಂ

ವಿದೇಶಿ ಮಹಿಳೆ, ಹೋಂ ಸ್ಟೆ ಒಡತಿ ಮೇಲೆ ಅತ್ಯಾಚಾರ ಪ್ರಕರಣ: ಅಪರಾಧಿಗಳ ವಿರುದ್ಧ ಮಹತ್ವದ ತೀರ್ಪು

ಮುಂದಿನ ಸುದ್ದಿ
Show comments