Publish Date: Thu, 24 Jan 2019 (16:36 IST)
Updated Date: Thu, 24 Jan 2019 (16:39 IST)
ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಕೋಟಿ ಕೋಟಿ ಹಣ ಪತ್ತೆಯಾಗಿದೆ.
ಆಂಧ್ರದ ನೆಲ್ಲೂರು ಜಿಲ್ಲೆಯಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣ ಪತ್ತೆಯಾಗಿದೆ. ಆಂಧ್ರ-ತಮಿಳುನಾಡು ಗಡಿಭಾಗದ ಚಕ್ಕಟಿ ಎಂಬಲ್ಲಿ ನಡೆದ ಘಟನೆ ನಡೆದಿದೆ.
ದಾಖಲೆ ಇಲ್ಲದೇ ವಾಹನದಲ್ಲಿ ಸಾಗಿಸುತ್ತಿದ್ದ 6 ಕೋಟಿ 34 ಲಕ್ಷ ರೂಪಾಯಿ ಹಣವನ್ನು ಪೊಲೀಸರು ಹಾಗೂ ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಆಂಧ್ರದಿಂದ ತಮಿಳುನಾಡಿಗೆ ಕಾರಿನಲ್ಲಿ ಎರಡು ಬ್ಯಾಗ್ ನಲ್ಲಿ 6 ಕೋಟಿ 34 ಲಕ್ಷ ಹಣವನ್ನು ಅಕ್ರಮ ಸಾಗಾಟ ಮಾಡಲಾಗುತ್ತಿತ್ತು. ಗಡಿಭಾಗದಲ್ಲಿ ವಾಹನ ತಪಾಸಣೆ ನಡೆಸುವ ವೇಳೆ ಅನುಮಾನಸ್ಪದವಾಗಿ ಹೊರಟಿದ್ದ ಕಾರನ್ನು ತಡೆದ ವೇಳೆ ಕೋಟಿ ಕೋಟಿ ಹಣ ಪತ್ತೆಯಾಗಿದೆ.
ಓಮನ್, ಕುವೈತ್, ಯುಎಸ್ ದೇಶಗಳ ಕರೆನ್ಸಿ ಸೇರಿದಂತೆ 2000, 500 ರೂ. ಮುಖಬೆಲೆಯ ಹೊಸ ನೋಟಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಣ ಸಾಗಿಸುತ್ತಿದ್ದ ಕಾರು ಹಾಗೂ ಪಶ್ಚಿಮ ಗೋದಾವರಿ ಜಿಲ್ಲೆಗೆ ಸೇರಿದ ಹರಿಬಾಬು, ಕನಕ ಸುರೇಶ್ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.