Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಲಾಡ್ಜನಲ್ಲಿ ಸ್ನೇಹಿತನೊಂದಿಗೆ ಇದ್ದ ಗೃಹಿಣಿ ಸಾವನ್ನಪ್ಪಿದ್ದು ಹೇಗೆ ಗೊತ್ತಾ?

ಲಾಡ್ಜನಲ್ಲಿ ಸ್ನೇಹಿತನೊಂದಿಗೆ ಇದ್ದ ಗೃಹಿಣಿ ಸಾವನ್ನಪ್ಪಿದ್ದು ಹೇಗೆ ಗೊತ್ತಾ?
ಹಾಸನ , ಗುರುವಾರ, 20 ಡಿಸೆಂಬರ್ 2018 (15:45 IST)
ಗೃಹಿಣಿಯೊಬ್ಬಳು ತನ್ನ ಸ್ನೇಹಿತನೊಂದಿಗೆ ಲಾಡ್ಜಗೆ ಬಂದಿದ್ದ ವೇಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ.

ಸ್ನೇಹಿತನೊಂದಿಗೆ ಲಾಡ್ಜ್ ಗೆ ಬಂದಿದ್ದ ಮಹಿಳೆ ಅನುಮಾನಾಸ್ಪದ ಸಾವು ಕಂಡಿರುವ ಘಟನೆ ನಡೆದಿದೆ. ಹಾಸನದ ಮಾರುಕಟ್ಟೆ ಪ್ರದೇಶದಲ್ಲಿರೋ ಖಾಸಗಿ ಲಾಡ್ಜ್ ನಲ್ಲಿ ಘಟನೆ ನಡೆದಿದೆ. ಬೈಕ್ ಶೋ ರೂಂನಲ್ಲಿ‌ ಕೆಲಸ ಮಾಡುತ್ತಿದ್ದ ಚಿರಂತಿ(23) ಮೃತ ಮಹಿಳೆಯಾಗಿದ್ದಾಳೆ.

 ಮೃತಳು ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕು ಬ್ಯಾಕರವಳ್ಳಿ ಗ್ರಾಮದ ನಿವಾಸಿಯಾಗಿದ್ದಾಳೆ. ಮದುವೆಯಾಗಿ ಗಂಡನಿಂದ ದೂರವಾಗಿದ್ದ ಚಿರಂತಿ, ರಾತ್ರಿ10.26ಕ್ಕೆ  ಆಟೋ ಚಾಲಕ ರಾಕೇಶ್ ಜೊತೆ ಲಾಡ್ಜ್ ಗೆ ಬಂದಿದ್ದಾಳೆ.  ಬಾತ್ ರೂಂನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಬಾತ್ ರೂಂಗೆ ಹೋಗಿ ಗಂಟೆಯಾದರೂ ಹೊರ ಬಾರದಿದ್ದಾಗ ಅನುಮಾನಗೊಂಡ ರಾಕೇಶ್, ಲಾಡ್ಜ್ ನವರ ಸಹಾಯದಿಂದ  ಬಾಗಿಲು ಮುರಿದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಹಾಸನ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಎಂಪಿ ಚುನಾವಣೆ: ಬಿಜೆಪಿ ಸಿದ್ಧತೆ ಚುರುಕು!