Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬೆಸ್ಕಾಂ, ವೈದ್ಯರ ನಿರ್ಲಕ್ಷ್ಯಕ್ಕೆ ಅಮಾಯಕ ಬಲಿ!

ಬೆಸ್ಕಾಂ, ವೈದ್ಯರ ನಿರ್ಲಕ್ಷ್ಯಕ್ಕೆ ಅಮಾಯಕ ಬಲಿ!
ತುಮಕೂರು , ಬುಧವಾರ, 19 ಡಿಸೆಂಬರ್ 2018 (11:34 IST)
ಬೆಸ್ಕಾಂ ಅಧಿಕಾರಿಗಳು ಹಾಗೂ ವೈದ್ಯರ ನಿರ್ಲಕ್ಷ್ಯಕ್ಕೆ ಅಮಾಯಕನೊಬ್ಬ ಜೀವ ಕಳೆದುಕೊಂಡ ಘಟನೆ ನಡೆದಿದೆ.
ವಿದ್ಯುತ್ ಪ್ರವಹಿಸಿ ಬಡ ಕೂಲಿ ಕಾರ್ಮಿಕ ದಾರುಣ ಸಾವು ಕಂಡಿದ್ದಾನೆ. ತುಮಕೂರು ಜಿಲ್ಲೆ ತುರುವೆಕೆರೆ ಪಟ್ಟಣದಲ್ಲಿ ಘಟನೆ ನಡೆದಿದ್ದು, ಶ್ರೀನಿವಾಸ್ (20) ಮೃತ ಯುವಕನಾಗಿದ್ದಾನೆ.

ಶ್ರೀನಿವಾಸ್ ತಿಪಟೂರು ತಾಲೂಕಿನ ಗೊರಗೊಂಡನಹಳ್ಳಿ ನಿವಾಸಿ. ಸಾರ್ವಜನಿಕ ಆಸ್ಪತ್ರೆ ನಾಮಫಲಕ ಕಾಮಗಾರಿ ಯಲ್ಲಿ ತೊಡಗಿದ್ದ ಶ್ರೀನಿವಾಸ್ ಗೆ ಪಕ್ಕದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ್ದಾನೆ.

ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯದ ಬಗ್ಗೆ ಪ್ರಕಟಣೆ ಹೊರಡಿಸಿದ್ದ ಬೆಸ್ಕಾಂ ಕ್ರಮದ
 ಹಿನ್ನೆಲೆ ಧೈರ್ಯವಾಗಿ ಕೆಲಸದಲ್ಲಿ ತೊಡಗಿದ್ದ ಕಾರ್ಮಿಕ ಏಕಾ ಏಕಿ ವಿದ್ಯುತ್ ಸಂಪರ್ಕ ನೀಡಿದ್ದರಿಂದ ಸಾವನ್ನಪ್ಪಿದ್ದಾನೆ.
ಕಾಮಗಾರಿ ಬಗ್ಗೆ ಬೆಸ್ಕಾಂ ಗೆ ಮಾಹಿತಿ ನೀಡದೆ ಆಸ್ಪತ್ರೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಕುಟುಂಬಕ್ಕೆ ಜೀವನಾಧರವಾಗಿದ್ದ ಕಾರ್ಮಿಕ ಶ್ರೀನಿವಾಸ ಸಾವನ್ನಪ್ಪಿದ್ದರಿಂದಾಗಿ ಆಸ್ಪತ್ರೆ ಬಳಿ ಮುಗಿಲು ಮುಟ್ಟಿದ ಮೃತನ ಸಂಬಂಧಿಕರ ರೋಧನ ಮನಕಲುಕುವಂತಿತ್ತು.

 

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಪತ್ರೆಯಿಂದ ಇಂದು ಡಿಸ್ಚಾರ್ಜ್ ಆದ ಸಿದ್ದಗಂಗಾ ಶ್ರೀಗಳು