Publish Date: Sat, 25 Aug 2018 (14:29 IST)
Updated Date: Sat, 25 Aug 2018 (14:33 IST)
ನಾಲ್ವರು ಮುಸುಕುಧಾರಿ ಖದೀಮರಿಂದ ಮನೆ ಬಾಗಿಲು ಮುರಿದು ಮನೆಯಲ್ಲಿದ್ದ ನಗದು ಹಾಗು ಚಿನ್ನಾಭರಣವನ್ನು ಕದ್ದೊಯ್ದಿರುವ ಘಟನೆ ನಡೆದಿದೆ.
ಆನೇಕಲ್ ಹೊರವಲಯ ಸರ್ಜಾಪುರದ ಎಸ್.ಎನ್.ಆರ್ ಬಡವಾಣೆಯಲ್ಲಿ ಈ ಘಟನೆ ನಡೆದಿದೆ. ಬಡಾವಾಣೆಯ ಕೆಲವು ಮನೆಗಳ ಬಳಿ ಹೋದ ಕಳ್ಳರು ಸಿಸಿಟಿವಿ ಇರುವುದನ್ನು ಗಮನಿಸಿ ಕ್ಯಾಮರಾ ಇಲ್ಲದ ಮನೆಯನ್ನು ನೋಡಿ ಕಳ್ಳತನ ಮಾಡಿದ್ದಾರೆ. ಎಸ್‌ಎನ್ ಆರ್ ಬಡವಾಣೆಯಲ್ಲಿನ ಮುನಿಸ್ವಾಮಿ ಎನ್ನುವವರ ಮನೆಗೆ ನುಗ್ಗಿದ ನಾಲ್ವರು ಮುಸುಕುಧಾರಿ ಕಳ್ಳರು ನಾಲ್ಕು ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿದ್ದಾರೆ. ಈ ದೃಶ್ಯ ಪಕ್ಕದ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಇದೆ ಬಡವಾಣೆಯಲ್ಲಿ ಮೂರನೇ ಬಾರಿ ಈ ರೀತಿ ಕಳ್ಳತನ ನಡೆಯುತ್ತಿದ್ದರೂ ಪೋಲಿಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.