Publish Date: Sun, 12 Aug 2018 (15:20 IST)
Updated Date: Sun, 12 Aug 2018 (15:22 IST)
ಸಿಸಿ ಟಿವಿ ಜಖಂಗೊಳಿಸಿ ಅಂಗಡಿಗಳ ಬಾಗಿಲು ಮುರಿದು ಕಳ್ಳತನ ಮಾಡಿರುವ ಘಟನೆ ನಡೆದಿದೆ. ಗದಗ ಜಿಲ್ಲೆ ಗಜೇಂದ್ರಗಡದಲ್ಲಿ ಕಳ್ಳತನ ಘಟನೆ ನಡೆದಿದೆ. ಪಟ್ಟಣದ ಗದಗ ರಸ್ತೆಯ ಮೂರು ಅಂಗಡಿಗಳಲ್ಲಿ ತಡರಾತ್ರಿ ಸರಣಿ ಕಳ್ಳತನ ನಡೆದಿದ್ದು, ಸಿಸಿ ಕ್ಯಾಮರಾ ಒಡೆದು ಖದೀಮರು ಕಳ್ಳತನಕ್ಕೆ ಮುಂದಾಗಿದ್ದಾರೆ.
ಪಟ್ಟಣದ ಗದಗ ರಸ್ತೆಯಲ್ಲಿರುವ ಆರ್.ಹೆಚ್.ಬೆಂಗಲ್ಸ್ ಅಂಗಡಿ ಹಾಗೂ ಪ್ರಶಾಂತ ಟಾಯರ್ಸ ಮತ್ತು ಪಂಚರ್ ಅಂಗಡಿಗಳಿಗೆ ಕನ್ನ ಹಾಕಿದ ಕಳ್ಳರ ತಂಡ ಆರ್.ಹೆಚ್ .ಬೆಂಗಲ್ಸ್ ಅಂಗಡಿ ಮುಂದಿನ ಸಿಸಿ ಟಿವಿಯನ್ನು ದುಷ್ಕರ್ಮಿಗಳು ಜಖಂಗೊಳಿಸಿದ್ದಾರೆ. ಇನ್ನು ವಾರದ ಹಿಂದಷ್ಟೇ ಪಟ್ಟಣದ ರೋಣ ಹಾಗೂ ಜೋಡು ರಸ್ತೆಯಲ್ಲಿ ಸರಣಿ ಕಳ್ಳತನ ಸೇರಿದಂತೆ ಒಟ್ಟು ಎರೆಡು ಬಾರಿ ಕಳ್ಳತನವಾಗಿದ್ದವು.
ಇದೀಗ ದುಷ್ಕರ್ಮಿಗಳು ಮತ್ತೆ ಕೈ ಚಳಕ ತೋರಿದ್ದಾರೆ. ಇಷ್ಟಾದರೂ ಎಚ್ಚೆತ್ತುಕೊಳ್ಳದ ಪೊಲೀಸ್ ಇಲಾಖೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಪೊಲೀಸ್ರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗಜೇಂದ್ರಗಡ ಪೊಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.