Select Your Language

Notifications

webdunia
webdunia
webdunia
webdunia

ಸರ್ಕಾರಿ ವೈದ್ಯರ ನಿವೃತ್ತಿ ವಯಸ್ಸು 65 ಕ್ಕೆ ಏರಿಸಲು ಚಿಂತನೆ…!

ಸರ್ಕಾರಿ ವೈದ್ಯರ ನಿವೃತ್ತಿ ವಯಸ್ಸು 65 ಕ್ಕೆ ಏರಿಸಲು ಚಿಂತನೆ…!
bangalore , ಸೋಮವಾರ, 7 ಆಗಸ್ಟ್ 2023 (21:40 IST)
ರಾಜ್ಯದಲ್ಲಿ ನುರಿತ ವೈದ್ಯರ ಕೊರತೆ ನೀಗಿಸಲು ಹಾಗೂ ಉತ್ತಮ ಆರೋಗ್ಯ ಸೇವೆ ಒದಗಿಸುವ ದೃಷ್ಟಿಯಿಂದ ಸರಕಾರಿ ವೈದ್ಯರ ಸೇವಾ ನಿವೃತ್ತಿ ವಯಸ್ಸನ್ನು 60ರಿಂದ 65ಕ್ಕೆ ಹೆಚ್ಚಿಸುವ ಬಗ್ಗೆ ರಾಜ್ಯ ಸರಕಾರ ಗಂಭೀರವಾಗಿ ಚಿಂತನೆ ನಡೆಸಿದೆ. ಇನ್ನೂ  ವೈದ್ಯರ ಕೊರತೆ ನೀಗಿಸಲು ಈಗಾಗಲೇ ತೆಲಂಗಾಣ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶದಲ್ಲಿ ವೈದ್ಯರ ಸೇವಾ ನಿವೃತ್ತಿ ವಯಸ್ಸು ಹೆಚ್ಚಳ ಮಾಡಲಾಗಿದೆ. ಇನ್ನೂ ಕರ್ನಾಟಕದಲ್ಲಿ ನುರಿತ ವೈದ್ಯರ ಸಮಸ್ಯೆ ಹೆಚ್ಚಾಗಿದ್ದು, ರೋಗಿಗಳ ಮೇಲೆ ಇದರ ಪರಿಣಾಮ ಬೀರುತ್ತಿರುವುದರಿಂದ ಸೇವಾ ನಿವೃತ್ತಿ ಹೊಂದುವ ವೈದ್ಯರನ್ನು ಮುಂದುವರಿಸುವ ಲೆಕ್ಕಾಚಾರದಲ್ಲಿ ಸರ್ಕಾರ ಚಿಂತನೆ ನಡೆಸಿದೆ .

ಇನ್ನೂ ಎಂಬಿಬಿಎಸ್ ವ್ಯಾಸಂಗ ಪೂರ್ಣಗೊಳಿಸಿದ ಬಳಿಕ ಕಡ್ಡಾಯವಾಗಿ ಒಂದು ವರ್ಷ ಗ್ರಾಮೀಣ ಸೇವೆ ಸಲ್ಲಿಸ ಬೇಕು ಎನ್ನುವ ಕಾನೂನನ್ನೂ ಮಾಡಿದೆ. ಆದರೂ ಕೂಡ ಸರ್ಕಾರಿ ಸೇವೆಯಲ್ಲಿನ ವೈದ್ಯರ ಸಂಖ್ಯೆ ಏರಿಕೆಯಾಗಿಲ್ಲ.ಇನ್ನೂ ಟ್ರೈನಿಂಗ್ ಪಡೆದುಕೊಳ್ಳುತ್ತಿರುವ ವೈದ್ಯರುಗಳು ಖಾಸಗಿ ಆಸ್ಪತ್ರೆಯಲ್ಲಿ ಸೇವೆ ನೀಡುತ್ತಿರೋದು ಇಲಾಖೆಗೆ ತಲೆನೋವು ಉಂಟುಮಾಡಿದೆ. ಇನ್ನೂ ವರ್ಷದಿಂದ ವರ್ಷಕ್ಕೆ ನಿವೃತ್ತಿಯಾಗುತ್ತಿರುವ ಸಂಖ್ಯೆ ಹೆಚ್ಚಳವಾಗಿದೆ. ಹೀಗಾಗಿ ಇಲಾಖೆ  ಸರ್ಕಾರಿ ವೈದ್ಯರ ನಿವೃತ್ತಿ ವಯಸ್ಸು 65 ಕ್ಕೆ ಏರಿಸಲು ಚಿಂತನೆ ನಡೆಸಲು ಮುಂದಾಗಿದ್ದು ಆರೋಗ್ಯ ಸಚಿವರ ಮುಂದೆಯು ಪ್ರಸ್ತಾವನೆ ಸಲ್ಲಿಕೆಯಾಗಿದೆ,ಇನ್ನೂ ಸಿಎಂ ಜೊತೆ ಚರ್ಚಿಸಿ ಮುಂದಿನ ನಿರ್ಧಾರಕ್ಕೆ ಬರಲು ಆರೋಗ್ಯ ಇಲಾಖೆ ಆಲೋಚಿಸಿದೆ


Share this Story:

Follow Webdunia kannada

ಮುಂದಿನ ಸುದ್ದಿ

ಶಾಸಕರ ಅಸಮಧಾನ ಶಮನಕ್ಕೆ ಅಖಾಡಕ್ಕಿಳಿದ ಸಿಎಂ..!