Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬೆಸ್ಕಾಂ ಗೆ ವಿದ್ಯುತ್ ಬಿಲ್‌ ಪಾವತಿಸದ ಸರ್ಕಾರಿ ಇಲಾಖೆಗಳು

ಬೆಸ್ಕಾಂ ಗೆ ವಿದ್ಯುತ್ ಬಿಲ್‌ ಪಾವತಿಸದ ಸರ್ಕಾರಿ ಇಲಾಖೆಗಳು
bangalore , ಸೋಮವಾರ, 7 ಆಗಸ್ಟ್ 2023 (19:39 IST)
ಬೆಸ್ಕಾಂ ಗೆ ವಿದ್ಯುತ್ ಬಿಲ್‌ ಪಾವತಿಸದ ಸರ್ಕಾರಿ ಇಲಾಖೆಗಳು ಸಾಮಾನ್ಯರಿಗೊಂದು ನ್ಯಾಯ ಸರ್ಕಾರಿ‌ ಇಲಾಖೆಗೆ ಒಂದು‌ ನ್ಯಾಯ ಎನ್ನುವಂತೆ ವರ್ತಿಸುತ್ತಿದೆ. ಸರಿಯಾಗಿ ವಿದ್ಯುತ್ ಬಿಲ್‌ಪಾವತಿಸದ ಸರ್ಕಾರಿ ಇಲಾಖೆಗಳು ಬರೊಬ್ಬರಿ 5,653 ಕೋಟಿ ಬಾಕಿ ಉಳಿಸಿಕೊಂಡು ಬಂದಿದೆ.
 
ಜೂನ್ 30ರ ವರೆಗಿನ ಅಂಕಿಅಂಶಗಳ ಪ್ರಕಾರ, ಸರ್ಕಾರಿ ಇಲಾಖೆ‌ಯಿಂದ‌ ಬೆಸ್ಕಾಂ ‌ಗೆ‌‌ ಬರೊಬ್ಬರಿ 5,653 ಕೋಟಿ ಬರಬೇಕಿದೆ. ಸಾಮಾನ್ಯರು ಬಿಲ್‌ ಪಾವತಿಸದೇ ಇದ್ದಲ್ಲಿ ನಿದ್ರಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತೆ. ಆದ್ರೆ ಸರ್ಕಾರಿ ಇಲಾಖೆಗಳು ನಿರಂತರವಾಗಿ ವಿದ್ಯುತ್ ಬಿಲ್‌ ಬಾಕಿ ಉಳಿಸಿಕೊಂಡೇ ಬರ್ತಿದೆ. ಇಷ್ಟಾದ್ರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿವೆ. 
 
ಇನ್ನೂ ಯಾವ ಇಲಾಖೆಯಿಂದ ಬಾಕಿ ಇದೆ ಅಂತಾ ನೋಡೋದಾದ್ರೆ...
 
1   ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ  4067ಕೋಟಿ
 
2 ನಗರಾಭಿವೃದ್ಧಿ ಇಲಾಖೆ 129‌ಕೋಟಿ
 
3 ಬಿಬಿಎಂಪಿ  684 ಕೋಟಿ
 
4 ಬಿಡಬ್ಲ್ಯೂ‌ಎಸ್‌ಎಸ್‌ಬಿ 484ಕೋಟಿ
 
5 ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ 59.51ಕೋಟಿ
 
6 ಜಲಸಂಪನ್ಮೂಲ‌ ಇಲಾಖೆ 44.23ಕೋಟಿ
 
7 ಸಣ್ಣನೀರಾವಿ ಇಲಾಖೆ 7.51ಕೋಟಿ
 
8 ಗ್ರಾಮೀಣ ಕುಡಿಯುವ ನೀರು ಮತ್ತು‌ ನೈರ್ಮಲ್ಯ ಇಲಾಖೆ 8.99ಕೋಟಿ
 
ಒಟ್ಟಾರೆಯಾಗಿ ಇನ್ನಿತರ ರಾಜ್ಯ ಸರ್ಕಾರಿ ಇಲಾಖೆ 107.53 ಕೋಟಿ ಇದ್ದು, ಇನ್ನಿತರ ಕೇಂದ್ರ ಸರ್ಕಾರಿ ಇಲಾಖೆ 59.90ಕೋಟಿ ಬಾಕಿ ಇದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಪಾಲಿಕೆ ಅದಾಯ ಹೆಚ್ಚಿಸಿ ಕೊಳ್ಳಲು ಸರ್ಕಾರದಿಂದ ಹೊಸ ಪ್ಲಾನ್