Publish Date: Sun, 26 Feb 2023 (13:31 IST)
Updated Date: Sun, 26 Feb 2023 (14:15 IST)
ಬೆಂಗಳೂರಿನಲ್ಲಿ ಹೈಸ್ಪೀಡ್ ರೈಲಿಗೆ ಕಲ್ಲು ತೂರಾಟ ಮಾಡಲಾಗಿದೆ.ಮೈಸೂರಿನಿಂದ ತಮಿಳುನಾಡಿನ ರಾಜಧಾನಿ ಚೆನ್ನೈಗೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್(Vande Bharat Express)ನ ಗಾಜುಗಳಿಗೆ ಹಾನಿಯಾಗಿದೆ.ಕಲ್ಲು ಎಸೆದಿರುವ ಘಟನೆಯಿಂದ ಯಾರಿಗೂ ಗಾಯಗಳಾಗಿಲ್ಲ.ರೈಲ್ವೆ ಇಲಾಖೆ ಪ್ರಕರಣ ದಾಖಲಿಸಿದೆ. ಕೋಚ್‌ನ ಎರಡು ಕಿಟಕಿಗಳಿಗೂ ಹಾನಿಯಾಗಿದೆ.ಕೃಷ್ಣರಾಜಪುರಂ ಮತ್ತು ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣಗಳ ನಡುವೆ ಘಟನೆ ನಡೆದಿದೆ ಎಂದು ನೈಋತ್ಯ ರೈಲ್ವೆ ಇಲಾಖೆ ಇಂದ ಮಾಹಿತಿ ನೀಡಲಾಗಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಮೇಲೆ ಜನರು ಕಲ್ಲು ತೂರಾಟವಾಗಿದ್ದು,ಇಂತಹ ಘಟನೆಗಳು ಇತ್ತೀಚೆಗೆ ಹೆಚ್ಚು ವರದಿಯಾಗುತ್ತಿರುವ ಹಿನ್ನೆಲೆ ರೈಲ್ವೇ ಸಂರಕ್ಷಣಾ ಪಡೆ ಜನವರಿಯಲ್ಲಿ ರೈಲುಗಳ ಮೇಲೆ ಕಲ್ಲು ತೂರಾಟದ 21ಪ್ರಕರಣ ದಾಖಲು ಮಾಡಿತ್ತು.ಫೆಬ್ರವರಿಯಲ್ಲಿ 13 ಪ್ರಕರಣ ದಾಖಲು ಮಾಡಿಲಾಗಿದೆ ಎಂದು ನೈಋತ್ಯ ರೈಲ್ವೆ ಇಲಾಖೆ ಬೆಂಗಳೂರುಯಿಂದ ಮಾಹಿತಿ ನೀಡಲಾಗಿದೆ.