Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹಾಸನಾಂಬೆಗೆ ಎಲ್ಲಾ ಭಕ್ತರೂ ಒಂದೇ ಅಲ್ವಾ, ಕುಮಾರಸ್ವಾಮಿ ಕುಟುಂಬಕ್ಕೆ ದೇವಿಯ ಎದುರು ಸನ್ಮಾನಕ್ಕೆ ಅಪಸ್ವರ

HD Kumaraswamy

Krishnaveni K

ಹಾಸನ , ಸೋಮವಾರ, 28 ಅಕ್ಟೋಬರ್ 2024 (08:52 IST)
Photo Credit: X
ಹಾಸನ: ನಿನ್ನೆಯಷ್ಟೇ ಸಂಸಾರ ಸಮೇತ ಹಾಸನಾಂಬೆಯ ದರ್ಶನ ಮಾಡಿದ್ದ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಕುಟುಂಬಕ್ಕೆ ದೇವಿಯ ಮುಂದೆ ಹಾರ ಹಾಕಿ ವಿಶೇಷ ಸನ್ಮಾನ ಮಾಡಿದ್ದಕ್ಕೆ ನೆಟ್ಟಿಗರು ಅಪಸ್ವರವೆತ್ತಿದ್ದಾರೆ.

ವರ್ಷಕ್ಕೊಮ್ಮೆ ತೆರೆಯುವ ಹಾಸನಾಂಬೆ ದೇಗುಲ ಮೊನ್ನೆಯಷ್ಟೇ ಓಪನ್ ಆಗಿದೆ. ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಪ್ರತಿನಿತ್ಯ ದೇವಿಯ ದರ್ಶನಕ್ಕೆ ಭೇಟಿ ನೀಡುತ್ತಿದ್ದಾರೆ. ನಿನ್ನೆ ಕುಮಾರಸ್ವಾಮಿ ತಮ್ಮ ಪತ್ನಿ, ಸೊಸೆ, ಮೊಮ್ಮಗನೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಮಗ ನಿಖಿಲ್ ಗಾಗಿ ವಿಶೇಷ ಪ್ರಾರ್ಥನೆ ನಡೆಸಿದ್ದಾರೆ.

ದೇವಿಯ ಎದುರು ಕುಮಾರಸ್ವಾಮಿ ಕುಟುಂಬ ಕೆಲವು ಸಮಯ ನಿಂತಿದ್ದು, ಸೀರೆ, ಹೂ, ಹಣ್ಣು ಅರ್ಪಿಸಿ ಪೂಜೆ ಸಲ್ಲಿಸಿದರು. ಈ ವೇಳೆ ಕುಮಾರಸ್ವಾಮಿ ಮತ್ತು ಕುಟುಂಬದವರಿಗೆ ಅರ್ಚಕರು ಹೂ ಮಾಲೆ ಹಾಕಿ ಸನ್ಮಾನವನ್ನೂ ಮಾಡಿದರು. ಈ ಬಗ್ಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇವಿಗೆ ಎಲ್ಲಾ ಭಕ್ತರೂ ಒಂದೇ ಅಲ್ವಾ? ಯಾಕೆ ವಿಐಪಿಗಳಿಗೆ ಮಾತ್ರ ಈ ರೀತಿ ಹಾರ ಹಾಕಿ ಸನ್ಮಾನ? ಅದೇ ಹಾರವನ್ನು ದೇವಿಗೆ ಹಾಕಿ ಪೂಜೆ ಮಾಡಿ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಸನಾಂಬೆ ದರ್ಶನಕ್ಕೆ ಲಕ್ಷಾಂತರ ಮಂದಿ ಬರುತ್ತಿದ್ದು, ಎಲ್ಲರಿಗೂ ದಿನದ 24 ಗಂಟೆಯೂ ದೇವಿಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಅದರಲ್ಲೂ ಸಾಮಾನ್ಯ ದರ್ಶನಕ್ಕೆ, ಪಾಸ್ ಪಡೆದು ದರ್ಶನ ಪಡೆಯುವವರಿಗೆ ಮತ್ತು ವಿಐಪಿಗಳಿಗೆ ಪ್ರತ್ಯೇಕ ಸರತಿ ಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇನ್ಮುಂದೆ ಶಬರಿಮಲೆ ಯಾತ್ರಾರ್ಥಿಗಳಿಗೆ ಕ್ಯಾಬಿನ್ ಬ್ಯಾಗ್‌ನಲ್ಲಿ ಇರುಮುಡಿ ಸಾಗಿಸಲು ಸರ್ಕಾರ ಅಸ್ತು