Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬಾಬುಪಾಳ್ಯ ಕಟ್ಟಡ ದುರಂತ: ಬಿಗಿ ಕ್ರಮಕ್ಕೆ ಎಚ್‌ ಡಿ ಕುಮಾರಸ್ವಾಮಿ ಒತ್ತಾಯ

Central Minister HD Kumaraswamy, BabuPalya Building Collapse, Chief Minister Siddaramaiah

Sampriya

ಬೆಂಗಳೂರು , ಗುರುವಾರ, 24 ಅಕ್ಟೋಬರ್ 2024 (17:20 IST)
ಬೆಂಗಳೂರಿನ: ಇಲ್ಲಿನ ಬಾಬುಸಾಪಾಳ್ಯದ ಕಟ್ಟಡ ಕುಸಿತ ದುರಂತ ಆಘಾತಕಾರಿ.  ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಸ್ಥಳಕ್ಕೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿರುವುದೇನೋ ಸರಿ. ಆದರೆ, ಇಂಥ ದೀರ್ಘಟನೆಗಳು ಭವಿಷ್ಯದಲ್ಲಿ ಘಟಿಸಬಾರದಂತೆ ಕಾಂಗ್ರೆಸ್ ಸರ್ಕಾರ ಬಿಗಿ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಈ ಸಂಬಂಧ ಕುಮಾರಸ್ವಾಮಿ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಬೆಂಗಳೂರಿನ ಬಾಬುಸಾಪಾಳ್ಯದ ಕಟ್ಟಡ ಕುಸಿತ ದುರಂತ ಆಘಾತಕಾರಿ.  ದೃಶ್ಯಮಾಧ್ಯಮದಲ್ಲಿ ಕಂಡ ಆ ದೃಶ್ಯ ಭಯಾನಕ. ದುರ್ಘಟನೆಯಲ್ಲಿ ಬಡ ಕೂಲಿಕಾರ್ಮಿಕರು ಜೀವ ತೆತ್ತಿರುವುದು @BBMPCOMM
ನಿರ್ಲಕ್ಷ್ಯ, ಅದಕ್ಷತೆಗೆ ಹಿಡಿದ ಕನ್ನಡಿ. ಬೆಂಗಳೂರು ನಗರದಲ್ಲಿ ಅಕ್ರಮ ಕಟ್ಟಡಗಳ ನಿರ್ಮಾಣಕ್ಕೆ ಅಂಕೆಯೇ ಇಲ್ಲ, ಅನುಮತಿ ಕೊಡುವಲ್ಲಿ ಎಸಗುವ ಭ್ರಷ್ಟಚಾರ, ರಾಜಕೀಯ ಒತ್ತಡ  ಇಂಥ ಘೋರ ದುರಂತಗಳಿಗೆ ಕಾರಣ. ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಸ್ಥಳಕ್ಕೆ ಭೇಟಿ, ಮೃತರಿಗೆ ಪರಿಹಾರ ಘೋಷಿಸಿರುವುದೇನೋ ಸರಿ. ಆದರೆ, ಇಂಥ ದೀರ್ಘಟನೆಗಳು ಭವಿಷ್ಯದಲ್ಲಿ ಘಟಿಸಬಾರದು. @INCKarnataka
 ಸರಕಾರ ಬಿಗಿ ಕ್ರಮ ಕೈಗೊಳ್ಳಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ಕೇಸ್ ನಲ್ಲಿ ಹೀರೋ ಆಗಿದ್ದ ಎಸಿಪಿ ಚಂದನ್, ಪುನೀತ್ ಕೆರೆಹಳ್ಳಿ ಕೇಸ್ ನಲ್ಲಿ ಇದೇನು ಮಾಡಿದ್ರು