Publish Date: Fri, 07 Aug 2020 (22:25 IST)
Updated Date: Fri, 07 Aug 2020 (22:27 IST)
ಬಿಜೆಪಿ ನೇತೃತ್ವದ ರಾಜ್ಯ ಸರಕಾರಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಖಡಕ್ ಸಲಹೆ ನೀಡಿದ್ದಾರೆ.
ಕೊರೊನಾ ವೈರಸ್ ತಡೆಗೆ ಪರಿಣಾಮಕಾರಿಯಾಗಿ ಹೋರಾಟ ನಡೆಸಬೇಕಿದೆ ಎಂದಿರುವ ಅವರು, ನೆರೆ ಪರಿಸ್ಥಿತಿ ತಲೆದೋರಿರುವುದರಿಂದ ಎಚ್ಚರ ತಪ್ಪಿದಾಗ ಜನರ ಬದುಕು ಮೂರಾಬಟ್ಟೆಯಾಗುತ್ತದೆ ಎಂದಿದ್ದಾರೆ.
ಇನ್ನು, ನೆರೆ ಸಂತ್ರಸ್ತರಿಗೆ ಕೇಂದ್ರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಮಳೆಹಾನಿಯಿಂದಾಗಿ ಮನೆ ಕಳೆದುಕೊಂಡವರ ನೆರವರಿಗೆ ಸರಕಾರ ಶೀಘ್ರ ಧಾವಿಸಬೇಕಿದೆ ಎಂದಿದ್ದಾರೆ.