Publish Date: Wed, 21 Mar 2018 (11:36 IST)
Updated Date: Wed, 21 Mar 2018 (11:38 IST)
ಬೆಂಗಳೂರು: ಹಾಸನ ಡಿಸಿ ರೋಹಿಣಿ ಸಿಂಧೂರಿ ವರ್ಗಾವಣೆ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿದೆ.
ರೋಹಿಣಿ ಸಿಂಧೂರಿ ತಮ್ಮ ವರ್ಗಾವಣೆ ವಿರುದ್ಧ ಸಿಎಟಿ ಅಂದರೆ ಕೇಂದ್ರೀಯ ಆಡಳಿತಾತ್ಮಕ ನ್ಯಾಯಾಧಿಕರಣಕ್ಕೆ ದೂರು ನೀಡಿದ್ದರು. ಈ ಸಂಬಂಧ ಸಿಎಟಿ ರೋಹಿಣಿ ವರ್ಗಾವಣೆಗೆ ತಡೆ ಒಡ್ಡಿತ್ತು. ಇದೀಗ ವಿಚಾರಣೆ ನಡೆಸಿ ತೀರ್ಪು ನೀಡಿದೆ.
ರೋಹಿಣಿ ಸಿಂಧೂರಿ ವರ್ಗಾವಣೆ ಮಾಡದೇ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದೆ. ಅಲ್ಲದೆ, ಹೊಸದಾಗಿ ವರ್ಗಾವಣೆ ಮಾಡಲು ಮುಖ್ಯ ಕಾರ್ಯದರ್ಶಿಗಳು ಸರಿಯಾದ ಕಾರಣಗಳೊಂದಿಗೆ ಆದೇಶ ನೀಡಿದರೆ ಮಾತ್ರ ವರ್ಗಾವಣೆ ಆದೇಶ ನೀಡಬಹುದಾಗಿದೆ ಎಂದು ಸಿಎಟಿ ತೀರ್ಪು ನೀಡಿದೆ. ಈ ಹಿನ್ನಲೆಯಲ್ಲಿ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ
Krishnaveni
Publish Date: Wed, 21 Mar 2018 (11:36 IST)
Updated Date: Wed, 21 Mar 2018 (11:38 IST)